ಕುಶಾಲನಗರ ನ.18:
ಕೂಡಿಗೆಯ ಕ್ರೀಡಾ ಶಾಲೆಯಲ್ಲಿ ಜ. 3 ರಂದು ಹಮ್ಮಿಕೊಂಡಿರುವ 17ರ ವಯೋಮಾನದ ಬಾಲಕಿಯರ ರಾಷ್ಟ್ರೀಯ ಮಟ್ಟದ ಮೊದಲ ಹಾಕಿ ಪಂದ್ಯಾವಳಿಯ ಪೂರ್ವಭಾವಿ ಸಭೆಯು ಕೂಡಿಗೆಯ ಡಯಟ್ ಸಭಾಂಗಣದಲ್ಲಿ ನಡೆಯಿತು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕೂಡುಮಂಗಳೂರು, ಕೂಡಿಗೆ ಗ್ರಾಮ ಪಂಚಾಯತಿ ಮತ್ತು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಭೆಯನ್ನು ಏರ್ಪಡಿಸಲಾಗಿತು.
ಪಂದ್ಯಾವಳಿಯು ಜಿಲ್ಲೆಯ ಮಡಿಕೇರಿ, ಪೊನಂಪೇಟೆ, ಸೋಮವಾರಪೇಟೆ ಮತ್ತು ಸಾಯಿ ಟರ್ಪ್ ಮೈದಾನದಲ್ಲಿ ಪಂದ್ಯಾವಳಿ ನಡೆಯು ಮಾಹಿತಿಯನ್ನು ಜಿಲ್ಲಾ ಕ್ರೀಡಾ ಸಂಚಾಲಕ ಪಲ್ಲೇದ್ ತಿಳಿಸಿದರು
ರಾಷ್ಟ್ರೀಯ ಮಟ್ಟದಲ್ಲಿ ತಂಡ ನೋಂದಣಿ ಮಾಡಿಕೊಳ್ಳಲು ಈಗಾಗಲೇ ಆನ್ ಲೈನ್ ಮೂಲಕ ಚಾಲನೆ ನೀಡಲಾಗಿದೆ. ಡಿ.15 ತಂಡಗಳ ನೋಂದಾಣಿಗೆ ಕಡೆಯ ದಿನಾಂಕ ಘೋಷಣೆಯಾಗಿದೆ. ಅಂದಾಜು 40 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪಂದ್ಯಾವಳಿ ನಡೆಸಲು ಕೊಡಗು ಜಿಲ್ಲೆಗೆ ಅವಕಾಶ ಲಭಿಸಿರುವುದು ನಮ್ಮೆಲ್ಲರ ಭಾಗ್ಯ. ಅದರಿಂದ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆಯ ಹೆಸರು ಚಿರಸ್ಥಾಯಿಯಾಗಿ ಉಳಿಸುವ ಉದ್ದೇಶದಿಂದ ಅತ್ಯಂತ ಶಿಸ್ತುಬದ್ಧವಾಗಿ, ಅದ್ದೂರಿಯಾಗಿ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಮನವಿ ಮಾಡಿದರು.
ಕಲಾ ತಂಡಗಳು, ವಿದ್ಯಾರ್ಥಿಗಳು, ಸಾರ್ವಜನಿಕರನ್ನು ಒಳಗೊಂಡ ಮೆರವಣಿಗೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತ್ತು.
ಸ್ವಾಗತ ಸಮಿತಿ, ಆಹಾರ ಸಮಿತಿ, ವೇದಿಕೆ ಸಮಿತಿ, ಆರ್ಥಿಕ ಸಮಿತಿ, ಮೈದಾನ ಸಮಿತಿಗಳನ್ನು ರಚಿಸಲು ನಿರ್ಧಾರ ಮಾಡಲಾಯಿತು ಸಭೆಯಲ್ಲಿ ಕ್ರೀಡಾಕೂಟದ ಅಯೋಚನೆಯ ಮೊದಲ ಸಭೆಯಲ್ಲಿ ಚರ್ಚೆಗಳು ನಡೆದವು.
ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಾಸ್ಕರ್ ನಾಯಕ್, ಕೂಡಿಗೆ ಪಂಚಾಯತಿ ಅಧ್ಯಕ್ಷ ಗಿರೀಶ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಕುಶಾಲನಗರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ದೈಹಿಕ ಶಿಕ್ಷಕ ಪೂರ್ಣೆಶ್, ಕೂಡುಮಂಗಳೂರು ಸಹಕಾರ ಸಂಘದ ಉಪಾಧ್ಯಕ್ಷ ಬಸಪ್ಪ, ಪ್ರಮುಖರಾದ ಟಿ.ಪಿ.ಹಮೀದ್, ಪೀಟರ್, ಟಿ.ಜಿ.ಪ್ರೇಮಕುಮಾರ್, ಫಿಲೋಮಿನಾ, ಹೆಬ್ಬಾಲೆ ಕಸಾಪ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಸಂಘ ಸಂಸ್ಥೆಗಳ ನೂತನ ಪ್ರಮುಖ ಮೊದಲ ಸಭೆಯಲ್ಲಿ ಹಾಜರಿದ್ದರು.
Back to top button
error: Content is protected !!