ದೇವಾಲಯ

ಮುಳ್ಳುಸೋಗೆ ಜನತಾ ಕಾಲನಿಯ ಗೌರಿ ಗಣೇಶ ದೇವಾಲಯದ 7ನೇ ವರ್ಷದ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ

ಕುಶಾಲನಗರ, ಫೆ 23:ಕೋಮು ಸೌಹಾರ್ದತೆಯ ಸಂಕೇತ ಎಂಬಂತಿರುವ ಮುಳ್ಳುಸೋಗೆ ಜನತಾ ಕಾಲನಿಯ ಗೌರಿ ಗಣೇಶ ದೇವಾಲಯದ 7ನೇ ವರ್ಷದ ವಾರ್ಷಿಕ ಪೂಜೋತ್ಸವಕ್ಕೆ ಚಾಲನೆ ನೀಡಲಾಯಿತು.

ಎರಡು ದಿನಗಳ ಕಾಲ ನಡೆಯಲಿರುವ ಪೂಜೋತ್ಸವ ಅಂಗವಾಗಿ ಗೌರಿ ಗಣೇಶ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಹೋಮ ಪೂಜಾ ವಿಧಿ ವಿಧಾನಗಳು ಅರ್ಚಕ ಶ್ರೀಧರ್ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು.

ಇಲ್ಲಿನ ವಿಶೇಷ ಎಂದರೆ ದೇವಾಲಯ ಮತ್ತು ಮಸೀದಿ‌ ಅಕ್ಕಪಕ್ಕದಲ್ಲಿ ಇರುವ ಕಾರಣ ಹಬ್ಬ ಹರಿದಿನಗಳ‌ ಸಂದರ್ಭ ಧರ್ಮಾತೀತವಾದ ಆಚರಣೆ ಕಾಣಬಹುದು. ಎರಡೂ ಸಮುದಾಯದವರು ಒಗ್ಗೂಡಿ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಸೌಹಾರ್ದತೆ ಸಾರುತ್ತಿರುವುದಾಗಿ ಟ್ರಸ್ಟ್‌ ಅಧ್ಯಕ್ಷೆ ಸುಚಿತ್ರಾ ತಿಮ್ಮಯ್ಯ, ಬಿಲಾಲ್ ಜುಮ್ಮಾ ಮಸೀದಿಯ ಉಸ್ತಾದ್ ಅಬ್ದುಲ್ ರೆಹಮಾನ್ ತಿಳಿಸಿದರು.

ದೇವಾಲಯ ವಾರ್ಷಿಕೋತ್ಸವ ಸಂದರ್ಭ ಮಸೀದಿಗೆ ವಿದ್ಯುತ್ ಅಲಂಕಾರ ಮಾಡಲಾಗುವುದು, ಅದೇ ರೀತಿ ಮಸೀದಿಯ ವಿಶೇಷ ದಿನಗಳಲ್ಲಿ ದೇವಾಲಯಕ್ಕೆ ಅಲಂಕಾರ ಮಾಡುವ ಮೂಲಕ,ಎರಡು ಧರ್ಮದವರು ಒಗ್ಗೂಡಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ ಎಂದು ಉದ್ಯಮಿಗಳಾದ ತಮ್ಮಯ್ಯ ಹಾಗೂ ಜಾವಿದ್ ಅಮೀರ್ ತಿಳಿಸಿದರು.
ಈ ಸಂದರ್ಭ ಟ್ರಸ್ಟ್
ಉಪಾಧ್ಯಕ್ಷೆ ಜ್ಯೋತಿ,
ಕಾರ್ಯದರ್ಶಿ ರಾಧಾ,
ಖಜಾಂಚಿ ಚಂದ್ರಿಕಾ, ಸಂಚಾಲಕಿ ವಿಜಿ
ನಿರ್ದೇಶಕರಾದ ರಮ್ಯ, ವಿನುತಾ, ರೇವತಿ, ತಮ್ಮಯ್ಯ, ನಾಗಪ್ರವೀಣ್ ಲೋಕೇಶ್, ಸಚಿನ್, ಸಂತೋಷ್ ಅಜಿತ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!