ಕ್ರೈಂ

ಕಿಗ್ಗಾಲು, ಕಡಗದಾಳು ಗ್ರಾಮದಲ್ಲಿ ಗಾಂಜಾ, ಎಂಡಿಎಂಎ ಮಾರಾಟ: ಆರೋಪಿಗಳ ಬಂಧನ

ಕುಶಾಲನಗರ, ಫೆ 20: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ /ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಗ್ಗಾಲು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸೇವನೆ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಿನಾಂಕ: 18-02-2026 ರಂದು ದಾಳಿ ನಡೆಸಿ 02 ಆರೋಪಿಗಳು ಹಾಗೂ ಕಡಗದಾಳು ಗ್ರಾಮದಲ್ಲಿ ದಿನಾಂಕ: 19-02-2026 ರಂದು ದಾಳಿ ನಡೆಸಿ 03 ಜನ ಆರೋಪಿಗಳನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಸದರಿ ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 20(b), 22 NDPS Act ಆಡಿಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಆರೋಪಿಗಳ ವಿವರ;

1. ಕಾರ್ತಿಕ್ 27 ವರ್ಷ, ಕಿಗ್ಗಾಲು ಗ್ರಾಮ

2. ಹರ್ಷವರ್ಧನ್ ಹೆಚ್.ಜಿ. 26 ವರ್ಷ, ಬಲಮುರಿ ಗ್ರಾಮ,

3. ಸಾಜೀರ್, 39 ವರ್ಷ, ನೀರುಕೊಲ್ಲಿ ಗ್ರಾಮ.

4. ಶಾರುಖ್. 28 ವರ್ಷ, ನೀರುಕೊಲ್ಲಿ ಗ್ರಾಮ

5. ನಿಯಾಸ್, 19 ವರ್ಷ, ಇಬ್ನಿವಳವಾಡಿ ಗ್ರಾಮ

ವಶಪಡಿಸಿಕೊಂಡ ಸ್ವತ್ತುಗಳ ವಿವರ;

1. 245 ಗ್ರಾಂ‌ ಗಾಂಜಾ

2. 28.50 ಗ್ರಾಂ ಎಂಡಿಎಂಎ

3. ಕೃತ್ಯಕ್ಕೆ ಬಳಸಿದ ಒಂದು ಆಟೋ ಮತ್ತು ಒಂದು ಕಾರು.

Related Articles

Leave a Reply

Your email address will not be published. Required fields are marked *

Back to top button
error: Content is protected !!