ಕ್ರೈಂ

ಪ್ರೇಮ ಪ್ರಕರಣ: ಯುವತಿ ಆತ್ಮಹತ್ಯೆ: ಯುವಕನ ವಿರುದ್ದ ದೂರು

ಮುಳ್ಳುಸೋಗೆ ಗ್ರಾಪಂ ಅಧ್ಯಕ್ಷರ ಪುತ್ರನ ವಿರುದ್ದ ದೂರು

ಕುಶಾಲನಗರ, ಆ 30: ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ‌ ಮಾರುತಿ ಬಡಾವಣೆಯಲ್ಲಿ ಯುವತಿಯೊಬ್ಬಳು ನೇಣು‌ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ಕಾಂತರಾಜು ಅವರ ಸಾಕು ಪುತ್ರಿ (ಪತ್ನಿ ಎಲಿಜಬೆತ್ ಸಹೋದರಿ ಪುತ್ರಿ) ಲ್ಯಾನ್ಸಿ (21) ಆತ್ಮಹತ್ಯೆಗೆ ಶರಣಾದವರು.
ಯುವಕನ‌ ವಿರುದ್ದ ದೂರು: ಲ್ಯಾನ್ಸಿ‌ ಹಾಗೂ ಮುಳ್ಳುಸೋಗೆ ಗ್ರಾಪಂ‌ ಅಧ್ಯಕ್ಷರಾದ ಚೆಲುವರಾಜು ಅವರ ಪುತ್ರ ಕುಮಾರ ಎಂಬವರು ಪರಸ್ಪರ ಪ್ರೀತಿಸುತ್ತಿದ್ದರು‌. ಕುಮಾರ್ ಕೂಡ‌ ಲ್ಯಾನ್ಸಿಯನ್ನು ಮದುವೆಯಾಗುವುದಾಗಿ ಭರವಸೆ‌ ನೀಡಿದ್ದ. ಆದರೆ ವಿಳಂಭ‌ ಮಾಡುತ್ತಿದ್ದ. ಸೋಮವಾರ ಕೂಡ ತನ್ನ ಪತ್ನಿಗೆ ಕರೆ‌ ಮಾಡಿ ಲ್ಯಾನ್ಸಿ ಬಗ್ಗೆ ವಿಚಾರಿಸಿದ್ದ. ಸಂಜೆಯೇ ಮಗಳು ಆತ್ಮಹತ್ಯೆ ‌ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕುಮಾರನೇ ಕಾರಣ ಎಂದು ಡೆತ್ ನೋಟ್ ಬರೆದಿರುವುದಾಗಿಯೂ ಯುವಕನ ವಿರುದ್ದ ಕ್ರಮಕೈಗೊಳ್ಳಲು ಯುವತಿ ತಂದೆ ಕಾಂತರಾಜು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!