ಆರೋಪ

ಕುಶಾಲನಗರ ಖಾಸಗಿ ಲ್ಯಾಬ್ ವರದಿ ಎಡವಟ್ಟು: ಆತಂಕ ಹುಟ್ಟಿಸಿದ ವ್ಯತಿರಿಕ್ತ ವರದಿ

ಕುಶಾಲನಗರ ಜು 06: ಹೃದಯಾಘಾತ, ಹೃದಯ ಸ್ಥಂಭನ ಪ್ರಕರಣಗಳಿಂದ ಯುವ ಸಮೂಹ ಆತಂಕಕ್ಕೆ ಒಳಗಾಗಿದ್ದು ಖಾಸಗಿ ಲ್ಯಾಬ್ ನ ತಪ್ಪು ವರದಿ ಮತ್ತಷ್ಟು ಆತಂಕ ಉಂಟು ಮಾಡಿದೆ. ಕುಶಾಲನಗರ ಕೋಣಮಾರಿಯಮ್ಮ ದೇವಾಲಯ ವೃತ್ತದ ಬಳಿ ಇರುವ ಖಾಸಗಿ ಲ್ಯಾಬ್ ನಲ್ಲಿ ತಪಾಸಣೆಗೆ ಒಳಗಾದ ನವೀನ್ ಪೂಜಾರಿ ಎಂಬವರ ವರದಿಯಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಅಧಿಕ ಇರುವ ಬಗ್ಗೆ ವರದಿ ನೀಡಲಾಯಿತು. ಇದರಿಂದ ಆತಂಕಕ್ಕೆ ಒಳಗಾದ ಅವರು, ಮೈಸೂರು ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದಾಗ ಅಂತಹ ಯಾವುದೇ ವ್ಯತಿರಿಕ್ತವಾದ ವರದಿ ಬಂದಿಲ್ಲ. ರಿಪೋರ್ಟ್ ನಲ್ಲಿ ಎಲ್ಲವೂ ಸಾಧರಣ ಎಂದು ದಾಖಲಾಗಿದೆ‌.ಈ ಬಗ್ಗೆ ಕುಶಾಲನಗರ ಖಾಸಗಿ ಲ್ಯಾಬ್ ತಂತ್ರಜ್ಞರ ಬಳಿ ವಿಚಾರಿಸಿದರೆ ಉಡಾಫೆಯಿಂದ ಪ್ರತಿಕ್ರಿಯೆ ನೀಡಿರುವುದಾಗಿ ನವೀನ್ ಆರೋಪಿಸಿದ್ದಾರೆ. ತಪ್ಪು ವರದಿಗಳಿಂದ ತಪಾಸಣೆಗೆ ಒಳಗಾದವರು ವಿನಾಕಾರಣ ಆತಂಕ‌ ಪಡಬೇಕಾದ ಪರಿಸ್ಥಿತಿ ನಿರ್ಮಾಣ ಸರಿಯಲ್ಲ. ಇದು ಮುಂದೆ ಪುನರಾವರ್ತನೆಯಾಗದಂತೆ ಎಚ್ಚರವಹಿಸಲು ಅವರು ಈ ಮೂಲಕ ಕೋರಿದ್ದಾರೆ.

Related Articles

One Comment

Leave a Reply

Your email address will not be published. Required fields are marked *

Back to top button
error: Content is protected !!