ಪ್ರತಿಭಟನೆ

ಆಂಗ್ಲ ಬ್ಯಾನರ್: ಹೆಚ್.ಶಿವರಾಮೇಗೌಡರ ಕರವೇ ಆಕ್ರೋಶ

ಕುಶಾಲನಗರ, ಫೆ 23: ಕುಶಾಲನಗರದ ರಥಬೀದಿಯಲ್ಲಿ ಬಟ್ಟೆ ಅಂಗಡಿಗೆ ಸಂಬಂಧಿಸಿದ ಬ್ಯಾನರ್ ಸಂಪೂರ್ಣ ಆಂಗ್ಲ‌ಭಾಷೆಯಲ್ಲಿರುವುದನ್ನು ಗಮನಿಸಿದ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಮತ್ತು ಪ್ರಮುಖರು ಬ್ಯಾನರ್ ಕಿತ್ತೆಸೆದರು.

ಸರಕಾರದ ಸೂಚನೆಯಿದ್ದರೂ ಕೂಡ‌ ಕೂಡ ಕನ್ನಡ‌ ಭಾಷೆ ಬಳಕೆಗೆ ಅಸಡ್ಡೆ ತೋರುತ್ತಿರುವ ಬಗ್ಗೆ ಅಂಗಡಿ ಮಾಲೀಕರನ್ನಹ ತರಾಟೆಗೆ ತೆಗೆದುಕೊಂಡರು.
ಪುರಸಭೆ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕ್ರಮಕೈಗೊಂಡು ದಂಡ ವಿಧಿಸಬೇಕಿದೆ ಎಂದು ಡಾ.ಬಿ.ಎ.ದಿನೇಶ್ ಶೆಟ್ಟಿ ಆಗ್ರಹಿಸಿದರು.
ಈ ಸಂದರ್ಭ ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ನಾಗರಾಜ್, ತಾಲೂಕು ಸಂಚಾಲಕ ರಂಗಸ್ವಾಮಿ, ತಾಲೂಕು ಸಹ ಕಾರ್ಯದರ್ಶಿ ಕಾರ್ತಿಕ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!