ಚುನಾವಣೆ

ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ 9 ಮಹಿಳಾ ನಿರ್ದೇಶಕರ ಆಯ್ಕೆ

30‌ ವರ್ಷಗಳಿಂದಲೂ ಚುನಾವಣೆ ನಡೆಯದೆ ಇದ್ದ ಕೂಡಿಗೆ ‌ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಪಾರುಪತ್ಯ ನಡೆಸುತ್ತಿದ್ದ ತಂಡಕ್ಕೆ ಭಾರೀ ಸೋಲು

ಕೂಡಿಗೆ, ಫೆ. 22: ಕೂಡಿಗೆ ಕೊಪ್ಪಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ 9 ನಿರ್ದೇಶಕರು ಆಯ್ಕೆಗೊಂಡಿರುತ್ತಾರೆ.
9 ನಿರ್ದೇಶಕರ ಸ್ಧಾನಕ್ಕೆ ಚುನಾವಣಾ ಕಣದಲ್ಲಿ  15 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.
ಒಟ್ಟು 40 ಮಂದಿ ಸದಸ್ಯ ಮತದಾರರಲ್ಲಿ 40 ಮಂದಿ ಮಹಿಳಾ ಸದಸ್ಯರು ಮತದಾನದಲ್ಲಿ ಭಾಗವಹಿಸಿದರು.
ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಮಮತ, ಪವಿತ್ರ, ರತ್ನ, ಜ್ಯೋತಿ, ಕಮಲ, ರತ್ನ, ರೇಣುಕಾ, ಮಂದಾಕಿನಿ, ಹಿಂದುಳಿದ ವರ್ಗ “ಬಿ” ಕ್ಷೇತ್ರದಿಂದ ಲತಾ, ಅಯ್ಕೆ ಗೊಂಡರು.
ಚುನಾವಣಾ ಪ್ರಕ್ರಿಯೆಯು ಆರಂಭವಾದ ನಂತರದಲ್ಲಿ ಬಿ.ಸಿ.ಎಂ.ಎ. ಕ್ಷೇತ್ರದಿಂದ ಜಯಶ್ರೀ ಮತ್ತು ಎಸ್ ಟಿ. ಕ್ಷೇತ್ರದ ವಿಭಾಗದಿಂದ ಲಕ್ಷ್ಮಿ  ಮಹಿಳಾ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು‌ ಎಂದು ಚುನಾವಣಾ ಅಧಿಕಾರಿ ಪ್ರದೀಪ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯದರ್ಶಿ ಸುಮಾ ಕಾರ್ಯ ನಿರ್ವಹಿಸಿದರು.
ಹಿಂದುಳಿದ ವರ್ಗ ಕ್ಷೇತ್ರದಿಂದ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳಿಗೆ ಸಮವಾಗಿ 20 ಮತಗಳು ಚಲಾವಣೆಗೊಂಡು ಸಮವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಸಹಮತ‌ ಮತ್ತು ಚುನಾವಣಾ ಅಧಿಕಾರಿ ತೀರ್ಮಾನದಂತೆ ಲಾಟರಿ ಮೂಲಕ ಹಿಂದುಳಿದ ವರ್ಗ “ಬಿ.” ಕ್ಷೇತ್ರದಿಂದ ಲತಾರವರು ಆಯ್ಕೆಗೊಂಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!