ಕುಶಾಲನಗರ, ಫೆ 12: ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಕೊಡಗು ಜಿಲ್ಲೆ ವತಿಯಿಂದ ಕುಶಾಲನಗರದ ಪಿ.ಎಂ.ಶ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿ.ಎಂ. ಶ್ರಿ. ಶಾಲೆ ಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕ್ರೀಡಾಕೂಟ ಉದ್ಘಾಟಿಸಿ,ಧ್ವಜಾರೋಹಣ ನೆರವೇರಿಸಿದರು. ಮಕ್ಕಳ ಕ್ರೀಡಾ ಪ್ರತಿಭೆ ಅನಾವರಣಕ್ಕೆ ಇಂತಹ ಕ್ರೀಡಾಕೂಟಗಳು ಸುವರ್ಣ ಅವಕಾಶವಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ್ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ಮಕ್ಕಳು ಕ್ರೀಡಾ ಮನೋಭಾವ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವಂತೆ ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸದಾಶಿವಯ್ಯ ಎಸ್ ಪಲ್ಲೇದ್ ಮಾತನಾಡಿ, ಜಿಲ್ಲೆಯಲ್ಲಿ ಏಳು ಪಿ ಎಂ ಶ್ರೀ ಶಾಲೆಗಳಿದ್ದು, ಪ್ರಥಮವಾಗಿ ಈ ಬಾರಿ ಕ್ರೀಡಾ ಕೂಟ ಆಯೋಜನೆ ಕುಶಾಲನಗರದಲ್ಲಿ ಮಾಡಿರುವುದು ಹೆಮ್ಮೆಯ ವಿಚಾರ.
ಎರಡು ಗುಂಪು ಆಟಗಳು ಹಾಗೂ ಎರಡು ವೈಯಕ್ತಿಕ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ, ಪುರಸಭೆ ಮಾಜಿ ಸದಸ್ಯಆನಂದ್ ಕುಮಾರ್, ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಪೂರ್ಣೇಶ್,ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸವಿತಾ , ಸದಸ್ಯೆ ಸುನಿತಾ , ಉಪ ನಿರ್ದೇಶಕರ ಕಚೇರಿ ಪಿ.ಎಂ.ಶ್ರೀ ನೋಡಲ್ ಅಧಿಕಾರಿ ಗೀತಾ , ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರತಾಪ್ , ಬೋಜೆಗೌಡ,ಸೋಮಶೇಖರ್, ಉತ್ತಪ್ಪ, ದೇವಾನಂದ್ ಚಂದ್ರಾವತಿ, ಪ್ರೇಮಲತಾಶೆಟ್ಟಿ, ಸುರೇಶ್ ಕುಮಾರ್, ಜಾನ್ಸನ್ ಮುಂತಾದವರು ಭಾಗವಹಿಸಿದ್ದರು.
ಕ್ರೀಡಾಕೂಟದ ಫಲಿತಾಂಶ : ಬಾಲಕರ ಕಬಡ್ಡಿ ಪ್ರಥಮ ಪಿ ಎಂ ಶ್ರೀ ಶಾಲೆ. ಸೋಮವಾರಪೇಟೆ, ದ್ವಿತೀಯ ಪಿ ಎಂ ಶ್ರೀ ಶಾಲೆ.ಕುಶಾಲನಗರ. ಬಾಲಕಿಯರ ಕಬಡ್ಡಿ ಪ್ರಥಮ ಪಿ ಎಂ ಶ್ರೀ ಶಾಲೆ.ಪಾಲಿಬೆಟ್ಟ, ದ್ವಿತೀಯ ಪಿ ಎಂ ಶ್ರೀ ಶಾಲೆ .ತಿತಿಮತಿ. ಥ್ರೋಬಾಲ್ ಬಾಲಕಿಯರ ವಿಭಾಗ ಪ್ರಥಮ ಸ್ಥಾನ ಪಿ ಎಂ ಶ್ರೀ ಮಡಿಕೇರಿ,ದ್ವಿತೀಯ ಪಿ ಎಂ ಶ್ರೀ ಶಾಲೆ ಕುಶಾಲನಗರ. ಪುಟ್ಬಾಲ್ ಬಾಲಕರು ವಿಭಾಗ ಪ್ರಥಮ ಪಿ ಎಂ ಶ್ರೀ ಶಾಲೆ.ತಿತಿಮತಿ, ದ್ವಿತೀಯ ಪಿ ಎಂ ಶ್ರೀ ಶಾಲೆ .ಪಾಲಿಬೆಟ್ಟ. ನೂರು ಮೀಟರ್ ಬಾಲಕರು ಓಟ ಪ್ರಥಮ ಚೇತನ್ ಪಿ ಎಂ ಶ್ರೀ ಸೋಮವಾರಪೇಟೆ,ದ್ವಿತೀಯ ಸುದರ್ಶನ್ ಪಿ ಎಂ ಶ್ರೀ ಕುಶಾಲನಗರ, ತೃತೀಯ ಸ್ಥಾನ: ಯುವ ಮುತ್ತಪ್ಪ ಪಿ ಎಂ ಶ್ರೀ ಮಡಿಕೇರಿ.ನೂರು ಮೀಟರ್ ಓಟ ಬಾಲಕಿಯರ ವಿಭಾಗದಲ್ಲಿ ಪ್ರಥಮ ಅನನ್ಯ ಪಿ ಎಂ ಶ್ರೀ ಮಡಿಕೇರಿ, ದ್ವಿತೀಯ ತಸ್ವಿಕ ತಂಗಮ್ಮ ಪಿ ಎಂ ಶ್ರೀ ಮಡಿಕೇರಿ, ತೃತೀಯ ಸಹನ ಕೆ ಎಂ ಪಿ ಎಂ ಶ್ರೀ ಪಾಲಿಬೆಟ್ಟ.ಬಸ್ ಬಂತು ಬಸ್ ಬಾಲಕಿಯರ ವಿಭಾಗ ಪ್ರಥಮ ಪವಿತ್ರ ಪಿ ಎಂ ಶ್ರೀ ಪಾಲಿಬೆಟ್ಟ, ದ್ವಿತೀಯ ನೇಹಾಲಿ ಪಿ ಎಂ ಶ್ರೀ ಕುಶಾಲನಗರ, ತೃತೀಯ ತಸ್ವಿಕ ತಂಗಮ್ಮ ಪಿ ಎಂ ಶ್ರೀ ಮಡಿಕೇರಿ. ಬಾಲಕರ ವಿಭಾಗ ಪ್ರಥಮ ಮಹಮ್ಮದ್ ಫಾರಿಸ್ ಪಿ ಎಂ ಶ್ರೀ ಮೂರ್ನಾಡು, ದ್ವಿತೀಯ ಗೌತಮ್ ಪಿ ಎಂ ಶ್ರೀ ಮಡಿಕೇರಿ, ತೃತೀಯ ಜಪೇಂದ್ರ ಪಿ ಎಂ ಶ್ರೀ ಪಾಲಿಬೆಟ್ಟ. ಗೋಣಿ ಚೀಲ ಓಟ ಬಾಲಕರಿಗೆ ಪ್ರಥಮ ಅಕ್ಷತ್ ಕುಮಾರ್ ಪಿ ಎಂ ಶ್ರೀ ಪಾಲಿಬೆಟ್ಟ,ದ್ವಿತೀಯ ಆರ್ಯನ್ ಪಿ ಎಂ ಶ್ರೀ ಕುಶಾಲನಗರ, ತೃತೀಯ ಹರ್ಷ ಪಿ ಎಂ ಶ್ರೀ ತಿತಿಮತಿ. ಬಲೂನ್ ಹೊಡೆಯುವುದು ಬಾಲಕರಿಗೆ ಪ್ರಥಮ ಅಬುತಾಹಿರ್ ಪಿ ಎಂ ಶ್ರೀ ಮೂರ್ನಾಡ್, ದ್ವಿತೀಯ ಈಶಾನ್ ಗೌಡ ಪಿ ಎಂ ಶ್ರೀ ಮೂರ್ನಾಡ್, ತೃತೀಯ ಸಂದೀಪ್ ಪಿ ಎಂ ಶ್ರೀ ಕುಶಾಲನಗರ. ಹೂಪ್ಸ್ ಬಾಲಕಿಯರಿಗೆ ಪ್ರಥಮ ವರ್ಷಿತ ಪಿ ಎಂ ಶ್ರೀ ಮಡಿಕೇರಿ,ದ್ವಿತೀಯ ಸುಶ್ಮಿತ ಪಿ ಎಂ ಶ್ರೀ ಮೂರ್ನಾಡ್, ತೃತೀಯ ಅಂಕಿತ ಪಿ ಎಂ ಶ್ರೀ ಮಡಿಕೇರಿ. ಬಲೂನ್ ಹೊಡೆಯುವುದು ಬಾಲಕಿಯರಿಗೆ ಪ್ರಥಮ ಪ್ರೇಕ್ಷ ಪಿ ಎಂ ಶ್ರೀ ಮಡಿಕೇರಿ, ದ್ವಿತೀಯ ಮಾನಸ ಪಿ ಎಂ ಶ್ರೀ ಸೋಮವಾರಪೇಟೆ, ತೃತೀಯ ಸಹನ ಪಿ ಎಂ ಶ್ರೀ ಪಾಲಿಬೆಟ್ಟ.
Back to top button
error: Content is protected !!