ಕುಶಾಲನಗರ, ಫೆ 20: ಕುಶಾಲನಗರ ತಾಲೂಕಿನಹಿಂದೂ ಸಂಗಮ ಆಯೋಜನಾ ಸಮಿತಿ ಹೆಬ್ಬಾಲೆ ಮಂಡಲದ ವತಿಯಿಂದ ಹೆಬ್ಬಾಲೆಯಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ ಅದ್ದೂರಿಯಾಗಿ ನಡೆಯಿತು.
ಹಿಂದೂ ಬಾಂಧವರು ಕೆಸರಿ ಶಲ್ಯ ಧರಿಸಿ ಬಾವುಟ ಹಿಡಿದು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಬಳಿಯಿಂದ ಹೆಬ್ಬಾಲೆಯ ಬನಶಂಕರಿ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ಸಾಗಿಬಂದರು. ಚಂಡೆವಾದ್ಯ, ವೀರಗಾಸೆ ಸಮ್ಮುಖದಲ್ಲಿ
ಕಳಸ ಹೊತ್ತು ಮಹಿಳೆಯರು ಮೆರವಣಿಗೆಯಲ್ಲಿ ಭಾಗಿಯಾದರು. ಭಾರತಾಂಭೆಯ ಭಾವಚಿತ್ರ ಹೊತ್ತ ಬೆಳ್ಳಿರಥದಲ್ಲಿ ವಿವಿಧ ವೇಷಧಾರಿಯ ಶಾಲಾ ವಿದ್ಯಾರ್ಥಿಗಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಸಾಗಿಬಂದ ಹಿಂದೂ ಬಾಂಧವರಿಗೆ ಮಜ್ಜಿಗೆ, ತಂಪುಪಾನಿಯ ವಿತರಣೆ ಮಾಡಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಳ್ಯದ ಡಾ.ಮನೋಜ್ ದಿಕ್ಸೂಚಿ ಭಾಷಣ ಮಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಸಂಯೋಜಕರೂ ಆದ ಜಿಪಂ ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿದರು.
ಈ ಸಂದರ್ಭ ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಸಂಯೋಜಕ ದೇವಿಪ್ರಸಾದ್, ಹೆಬ್ಬಾಲೆ ಗ್ರಾಪಂ ಮಾಜಿ ಅಧ್ಯಕ್ಷೆ ಅರುಣಕುಮಾರಿ, ಜಿಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶೋಕ್, ಗ್ರಾಪಂ ಸದಸ್ಯರುಗಳಾದ ಮಂಜುನಾಥ್, ಪರಮೇಶ್, ಹೆಚ್.ಎಸ್.ರಘು, ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಸುರೇಶ್, ನಿವೃತ್ತ ಶಿಕ್ಷಕ ಲೋಕೇಶ್, ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಹೆಚ್.ಎಲ್.ಮಂಜುನಾಥ್ ಮುಖಂಡರಾದ ಹೆಚ್.ಟಿ.ಮಂಜುನಾಥ್, ಪುಟ್ಟ, ಟಿ.ಬಿ.ಜಗದೀಶ್, ಚಂದ್ರಶೇಖರ್ ಹೆರೂರು, ಭರತ್ ಮಾಚಯ್ಯ, ಹರೀಶ್, ನವನೀತ್, ಸಾಮಾಜಿಕ ಕಾರ್ಯಕರ್ತ ಮೋಹನ್, ಮೋಹನ್ ಮತ್ತಿತರರು ಇದ್ದರು.
Back to top button
error: Content is protected !!