ಕುಶಾಲನಗರ, ಫೆ 23: 7ನೇ ಹೊಸಕೋಟೆ ಗ್ರಾಮದ ಕಲ್ಲುಕೋರೆ ರಸ್ತೆಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸ್ಥಳೀಯ ನಿವಾಸಿಯೂ ಆದ ನಿವೃತ್ತ ಸರಕಾರಿ ಅಧಿಕಾರಿಯೊಬ್ಬರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯವರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
29 ಸೆಂಟ್ ಜಾಗದಲ್ಲಿ 2016-17 ರಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿದೆ. ದೇವಾಲಯ ನಿರ್ಮಾಣಕ್ಕೆ ಎಂಪಿ, ಎಂಎಲ್ಎ ಎಂಎಲ್ಸಿ ಅನುದಾನ ಕೂಡ ದೊರೆತಿದೆ. ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಕಾರ್ಯ ಕೂಡ ನಡೆದಿದೆ. ಆದರೆ ದೇವಾಲಯ ಜಾಗಕ್ಕೆ ಹೊಂದಿಕೊಂಡಂತಿರುವ ಅಡಕೆ ತೋಟಕ್ಕೆ ದಾರಿ ಒದಗಿಸಬೇಕೆಂದು ನಿವೃತ್ತ ಅಧಿಕಾರಿ ಪಟ್ಟು ಹಿಡಿದು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಂಡ ರಮೇಶ್ ಆರೋಪಿಸಿದ್ದಾರೆ.
ಈಗಾಗಲೆ ಇದೇ ವ್ಯಕ್ತಿ ಮಹಾಲಿಂಗೇಶ್ವರ ಕೆರೆ ಜಾಗವನ್ನು ಕೂಡ ಕಬಳಿಸಿಕೊಂಡಿದ್ದಾರೆ. ಕೆರೆ ಒತ್ತುವರಿ ಮಾಡಿಕೊಂಡ ಜಾಗದ ಮೂಲಕ ಅಡಕೆ ತೋಟಕ್ಕೆ ಸಂಪರ್ಕ ವ್ಯವಸ್ಥೆಯಿದೆ. ಆದರೂ ಕೂಡ ದೇವಾಲಯ ಜಾಗದ ಮೇಲೆ ಕಣ್ಣು ಹಾಕಿ ನಮ್ಮ ವಿರುದ್ದ ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಬ್ರಿಟೀಷರ ಕಾಲದಲ್ಲೇ ಈ ದೇವಾಲಯಕ್ಕೆ ದಾನವಾಗಿ ಜಾಗ ದೊರೆತಿರುವ ಬಗ್ಗೆ ನಮ್ಮಲ್ಲಿ ದಾಖಲೆಯಿದೆ. ಆದರೂ ಕೂಡ ದೇವಾಲಯ ನಿರ್ಮಾಣವಾಗಲಿ ಎಂಬ ಉದ್ದೇಶಕ್ಕೆ ನಾವು ಸುಮ್ಮನಿದ್ದೇವೆ. ಇದೇ ರೀತಿ ಕಿರುಕುಳ ಮುಂದುವರೆದರೆ ಸಮಿತಿ ವತಿಯಿಂದ ಎಸ್ಪಿ ಹಾಗೂ ಡಿಸಿಗೆ ದೂರು ನೀಡಲಾಗುವುದು ಎಂದು ಸಮಿತಿಯ ನಿರ್ದೇಶಕರಾದ ದಾಸಂಡ ಜಗದೀಶ್‌ಮಾದಪ್ಪ, ಬಿ.ಎಸ್.ಬಾಲಕೃಷ್ಣ ರೈ, ಬಿ.ಎಸ್.ಜಗನ್ನಾಥ ರೈ ಮತ್ತಿತರರು ತಿಳಿಸಿದರು.
ಈ ಸಂದರ್ಭ ಸಮಿತಿ ನಿರ್ದೇಶಕರಾದ ರಿಜೇಶ್, ಕಿರಣ, ಜೀವನ್, ಈರಪ್ಪ, ಕುಮಾರ್, ಶಿವಪ್ಪ, ರುಕ್ಮಯ್ಯ, ಮಹೇಶ್, ಶರವಣ, ವಿಕ್ರಂ, ಸುಜು, ಸುನಿಲ್, ಪೆಮ್ಮಯ್ಯ, ಆಕಾಶ್, ರಾಜ, ನಂದ, ಪೊನ್ನಪ್ಪ, ಮಹೇಶ್, ರಮೇಶ್, ಬಸವರಾಜ, ಉಣ್ಣಿ, ಜೀವನ್, ಚಂದ್ರ, ಚೇತನ್, ಶೇಖರ್ ಮತ್ತಿತರರು ಇದ್ದರು.
Back to top button
error: Content is protected !!