ಕುಶಾಲನಗರ, ಫೆ 24: ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ನಂಜರಾಯಪಟ್ಟಣ ಮಂಡಲದ ವತಿಯಿಂದ ಹಿಂದೂ ಸಂಗಮ ಅದ್ದೂರಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಹೊಸಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಹೊಸಪಟ್ಟಣದಿಂದ ಆರಂಭಗೊಂಡ ಶೋಭಾಯಾತ್ರೆ ಮೆರವಣಿಗೆ ನಂಜರಾಯಪಟ್ಟಣ ಸೊಸೈಟಿ ವರೆಗೆ ತೆರಳಿ ಬಳಿಕ ನಂಜುಂಡೇಶ್ವರ ದೇವಾಲಯ ಬಳಿ ಸಮಾಪ್ತಿಗೊಂಡಿತು.
ವಿವಿಧ ವೇಷಧಾರಿ ಮಕ್ಕಳನ್ನು ಹೊತ್ತ ಬೆಳ್ಳಿ ರಥ, ಭಾರತಾಂಭೆ ಭಾವಚಿತ್ರ ಒಳಗೊಂಡ ವಾಹನದೊಂದಿಗೆ ಕಳಸ ಹೊತ್ತ ಮಹಿಳೆಯರೊಂದಿಗೆ 700 ಕ್ಕೂ ಅಧಿಕ ಹಿಂದೂ ಬಾಂಧವರು ಪುರುಷರು ಮಹಿಳೆಯರಾದಿಯಾಗಿ ಕೇಸರಿ ಶಲ್ಯ ಧರಿಸಿ ಭಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದರು.
ಮೆರವಣಿಗೆ ಉದ್ದಕ್ಕೂ
ಮಕ್ಕಳಿಂದ ಸಾಂಪ್ರದಾಯಿಕ ಭಜನೆ ನೃತ್ಯ ಪ್ರದರ್ಶನ ನಡೆಯಿತು. ಚಂಡೆ ವಾದ್ಯದೊಂದಿಗೆ ಬೃಹತ್ ಗೊರಿಲ್ಲಾ ಮತ್ತಿತರ ಗೊಂಬೆ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಮುಂದಿನ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿ ಮಹತ್ವ ಅರಿವು ಮೂಡಿಸುವುದು, ಹಿಂದೂ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಿರುವುದಾಗಿ ನಂಜರಾಯಪಟ್ಟಣ ಮಂಡಲ ಅಧ್ಯಕ್ಷ ಬಿ.ಸಿ.ಮುರಳಿ ಮಾದಯ್ಯ ತಿಳಿಸಿದರು.
ಕಾರ್ಯಕ್ರಮದ ಕುರಿತು ಕೆ.ವಿ.ಪ್ರೇಮಾನಂದ ಮಾಹಿತಿ ನೀಡಿದರು.
ಆರ್.ಎಸ್ ಎಸ್ ಕಾರ್ಯಕಾರಿಣಿ ಸದಸ್ಯರಾದ
ನವೀನ್ ಸುಬ್ರಮಣ್ಯ
ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭ
ಕುಶಾಲನಗರ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷರಾದ ದೇವಿಪ್ರಸಾದ್, ನಂಜರಾಯಪಟ್ಟಣ
ನಂಜಂಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎನ್.ಕೆ.ಮೋಹನ್ ಕುಮಾರ್, ಮಾಜಿ ಶಾಸಕ ಅಪ್ಪಚ್ಚುರಂಜನ್, ಗ್ರಾಮದ ಪ್ರಮುಖರಾದ ಕೆ.ವಿ.ಪ್ರೇಮಾನಂದ, ಕೆ.ಸ್.ರತೀಶ್, ಆರ್.ಕೆ.ಚಂದ್ರ, ನವೀನ, ಮಾವಜಿ ರಕ್ಷಿತ್, ವಿಜು ಚಂಗಪ್ಪ, ಯದುಕುಮಾರ್, ವಂದನಾ ಸೇರಿದಂತೆ ಮಾಜಿ ಜನಪ್ರತಿನಿಧಿಗಳು, ಸಂಘಸಂಸ್ಥೆ ಪ್ರಮುಖರು ಇದ್ದರು.
Back to top button
error: Content is protected !!