ಕುಶಾಲನಗರ ಜ 27: ಬೆಂಗಳೂರಿನ ಬಿಟಿಎಂ ಲೇಔಟ್ ನ ಕೆಂಪೇಗೌಡ ಮೈದಾನದಲ್ಲಿ ಬಿಟಿಎಂ ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ನಡೆದ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ ನಲ್ಲಿ ಭಾಗವಹಿಸಿದ ಏಂಜಲ್ಸ್ ವಿಂಗ್ಸ್ ಸ್ಕೇಟಿಂಗ್ ಅಕಾಡೆಮಿಯ ಶನಿವಾರ ಸಂತೆ ಸೀಕ್ರೆಟ್ ಹಾರ್ಟ್ ಶಾಲೆಯ 33 ವಿದ್ಯಾರ್ಥಿಗಳು, ಶುಂಠಿಕೊಪ್ಪ ಸಂತ ಮೇರಿ ಶಾಲೆಯ 6 ಮಕ್ಕಳು, ಮಡಿಕೇರಿಯ ಶಾಖೆಯ 5 ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿ 9 ಚಿನ್ನಣ 15 ಬೆಳ್ಳಿ, 11 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಇದರೊಂದಿಗೆ ಏಂಜಲ್ಸ್ ವಿಂಗ್ಸ್ ಸ್ಕೇಟಿಂಗ್ ಅಕಾಡೆಮಿ ಗೆ ಉನ್ನತ ಸ್ಕೇಟಿಂಗ್ ಅಕಾಡೆಮಿ ಎಂಬ ಬಿರುದನ್ನು ನೀಡುವ ಮೂಲಕ ಓವರಾಲ್ ಚಾಂಪಿಯನ್ ಪಟ್ಟಕ್ಕೆ ಭಾಜನರಾದರು. ಏಂಜಲ್ಸ್ ವಿಂಗ್ ಸ್ಕೇಟಿಂಗ್ ಅಕಾಡೆಮಿ ಯ ಕೋಚ್ ಅದಂತಹ ಅನೂಪ್ ಡಿಸೋಜಾ ರವರಿಗೆ ಗೌರವಾರ್ಥ ಸನ್ಮಾನಿಸಿ ಗೌರವಿಸಲಾಯಿತು.
Back to top button
error: Content is protected !!