ಕುಶಾಲನಗರ, ನ 15: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ದಿವಂಗತ ಪನ್ನೇ ಮುಸ್ತಫ ರವರ ಪುತ್ರ ಇರ್ಷಾದ್ ಮುಸ್ತಫ ಹಾಗೂ ಉಸ್ಮಾನ್ ಸುಂಟಿಕೊಪ್ಪ ರವರ ಪುತ್ರ ಶಾಹಿಲ್ ಉಸ್ಮಾನ್ ಇರ್ವರೂ ಕೊಡಗು ಜಿಲ್ಲೆಗೆ ಹೆಮ್ಮೆ ತರುವ ವಿಚಾರವಾಗಿ ಸೆಸ್ಟೋಬಾಲ್ (Cestoball) ನಲ್ಲಿ ಭಾರತಕ್ಕೆ ಚಾಪಿಯನ್ ಆಗಿ ಹೊರಹೋಮ್ಮಿರುತ್ತಾರೆ.
ಇವರು 2023 ರ ಮೂರು ದೇಶಗಳ (ಬ್ಯಾಂಕೋಕ್, ಥೈಲ್ಯಾಂಡ್, ರತ್ನಪುರ ) ಅಂತರ್ ರಾಷ್ಟ್ರೀಯ ಸೆಸ್ಟ್ ಬಾಲ್ ಚಾಂಪಿಯನ್ ಶಿಫ್ನ ನಲ್ಲಿ ಭಾರತಕ್ಕೆ ಕೀರ್ತಿತರುವ ಚಾoಪಿಯನ್ ಗಳಾಗಿದ್ದು ಹೆಮ್ಮೆಯ ವಿಚಾರ. ಇವರು ಥೈಲ್ಯಾಂಡ್ ಹಾಗೂ ಶ್ರೀಲಂಕಾ ವಿರುದ್ಧ ಭಾರತಕ್ಕೆ ಚಿನ್ನದ ಪದಕ ಗಳಿಸುವಲ್ಲಿ ಯಶಸ್ವಿ ಯಾಗಿರುತ್ತಾರೆ. ಶಾಹಿಲ್ ಉಸ್ಮಾನ್ ರವರು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿರುತ್ತಾರೆ. ಇರ್ಷಾದ್ ಮುಸ್ತಫ ರವರು ಅಂತರ್ ರಾಷ್ಟ್ರೀಯ ಚಾಂಪಿಯನ್ ಶಿಫ್ನಲ್ಲಿ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿರುತ್ತಾರೆ. ದೆಹಲಿ ಮುಖಾಂತರ ಭಾರತಕ್ಕೆ ಆಗಮಿಸಿ ಬೆಂಗಳೂರಿನಿಂದ ಕೊಡಗಿನ ಹೆಬ್ಬಾಗಿಲಾದ ಕುಶಾಲನಗರದ ಕೊಪ್ಪ ಗೇಟ್ ಬಳಿ ಗೆಳೆಯರ ಬಳಗ,ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡು ಬೈಚನಹಳ್ಳಿ ವರೆಗೆ ಮೆರವಣಿಗೆಯಲ್ಲಿ ಕರೆದೊಯ್ದರು.
Back to top button
error: Content is protected !!