ಪ್ರತಿಭಟನೆ
ಮಂಗಳೂರು ವಿವಿ ವಿರುಧ್ಧ ಕುಶಾಲನಗರ ಡಿಗ್ರಿ ವಿದ್ಯಾರ್ಥಿಗಳ ಪ್ರತಿಭಟನೆ
ಕುಶಾಲನಗರ, ನ 15: ಪರೀಕ್ಷೆ ಫಲಿತಾಂಶ ಗೊಂದಲ ಹಿನ್ನಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಬರುವ ಕುಶಾಲನಗರ ( ಕೊಡಗು) ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ಬಿಕಾಂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಫಲಿತಾಂಶ ವೆಬ್ ಸೈಟ್ ನಲ್ಲಿ ಪಾಸ್ ಎಂದು ಪ್ರಕಟಗೊಂಡರೂ ನಂತರದ ದಿನಗಳಲ್ಲಿ ಅದೇ ವಿದ್ಯಾರ್ಥಿಯ ಫಲಿತಾಂಸ ಬದಲಾವಣೆಯಾಗಿ ಫೇಲ್ ಎಂದು ತೋರಿಸುತ್ತಿದ್ದು ಈ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.