ಕ್ರೀಡೆ

ಶಿಕ್ಷಕರ ದಿನಾಚರಣೆ ಅಂಗವಾಗಿ ಕೂಡಿಗೆಯಲ್ಲಿ ಶಿಕ್ಷಕರಿಗೆ ನಡೆದ ಕ್ರೀಡಾಕೂಟ

ಕುಶಾಲನಗರ, ಸೆ.1: ಸೋಮವಾರಪೇಟೆ ತಾಲ್ಲೂಕು ಶಾಲಾ ಶಿಕ್ಷಣ
ಹಾಗೂ ಸಾಕ್ಷರತಾ ಇಲಾಖೆಯ
ಸಹಕಾರದೊಂದಿಗೆ ತಾಲ್ಲೂಕು
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಸೆ.5 ರಂದು ನಡೆಯಲಿರುವ
ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ
ಶಿಕ್ಷಕರಿಗೆ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮೈದಾನದಲ್ಲಿ ಗುರುವಾರ(ಸೆ.1ರಂದು) ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು.
ತಾಲ್ಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಆಗಮಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ
ಶಿಕ್ಷಕರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್,ಪ್ರತಿ ದಿನವೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರಿರೂ ಮಕ್ಕಳ ಹಾಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇಂತಹ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದರು.
ಕ್ರೀಡಾಕೂಟಗಳು ನಮ್ಮಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆಸುವುದರೊಂದಿಗೆ ರಾಷ್ಟ್ರೀಯ ಭಾವೈಕ್ಯತೆ ಅರಿವು ಹೆಚ್ಚಿಸಲು ಸಹಕಾರಿಯಾಗಿವೆ ಎಂದರು.
ಶಿಕ್ಷಕರು ತಮ್ಮ ಶಾಲಾ ಚಟುವಟಿಕೆಗಳೊಂದಿಗೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಕೂಡ ಸ್ಪರ್ಧಾ ಮನೋಭಾವನೆ ಸಹಕಾರಿಯಾಗಿದೆ ಎಂದು ಬಿಇಓ ಸುರೇಶ್ ಹೇಳಿದರು.
ಕ್ರೀಡಾಕೂಟ ಉದ್ಘಾಟಿಸಿದ ಕೂಡುಮಂಗಳೂರು
ಗ್ರಾಮ ಪಂಚಾಯಿತಿ ಸದಸ್ಯೆ ಜೆ.ಫಿಲೋಮಿನಾ ಮಾತನಾಡಿ, ಸದಾ ಮಕ್ಕಳ ಚಟುವಟಿಕೆಗಳಲ್ಲಿ ತೊಡಗುವ ಶಿಕ್ಷಕರು ತಮ್ಮ ವೃತ್ತಿಯೊಂದಿಗೆ ಇಂತಹ ಕ್ರೀಡೆ- ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕ್ರಿಯಾಶೀಲತೆಯಿಂದ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಚ್.ಎಸ್.ಚೇತನ್ ಮಾತನಾಡಿ, ಇಂತಹ ಕ್ರೀಡಾಕೂಟಗಳು ಶಿಕ್ಷಕರಿಗೆ ತಮ್ಮ ದೈನಂದಿನ ಚಟುವಟಿಕೆಗಳೊಂದಿಗೆ
ಕ್ರೀಡಾಸ್ಪೂರ್ತಿ ಬೆಳೆಸಲು ಸಹಕಾರಿಯಾಗಿವೆ ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಸೋಮಶೇಖರ್,
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರದೀಪ್ ಮಾತನಾಡಿದರು.
ಬಿ.ಆರ್.ಸಿ.
ಜಿ.ಎಂ.ಹೇಮಂತ್,
ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ.ಧರ್ಮಪ್ಪ, ಕಾರ್ಯದರ್ಶಿ ಕೆ.ಆರ್. ರತ್ನಕುಮಾರ್,
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘದ ಅಧ್ಯಕ್ಷ ಟಿ.ಕೆ.ಬಸವರಾಜ್, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಕುಮಾರ್, ತಾಲ್ಲೂಕಿನ ವಿವಿಧ ಸಂಘಗಳ ಪ್ರತಿನಿಧಿಗಳಾದ ಎ.ಎ.ಲಕ್ಷ್ಮಣ್, ಎಸ್.ವಿರೂಪಾಕ್ಷ,
ದಯಾನಂದ ‌ಪ್ರಕಾಶ್, ಪದಾಧಿಕಾರಿಗಳಾದ ನಾಗೇಶ್, ಸಿ.ಕೆ.ಶಿವಕುಮಾರ್, ವಿ.ಜಿ.ದಿನೇಶ್,
ಕೂಡಿಗೆ ಡಯಟ್ ನ ನಿವೃತ್ತ ಹಿರಿಯ ಉಪನ್ಯಾಸಕಿ ಬಿ.ಬಿ.ಸಾವಿತ್ರಿ, ಸಿಆರ್ ಪಿ ಕೆ.ಶಾಂತಕುಮಾರ್ ಇತರರು ಇದ್ದರು.
ಕ್ರೀಡಾಪ್ರೇಮ ಮೆರೆದ ಶಿಕ್ಷಕರು : ದಿನವಿಡೀ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು
ಕ್ರೀಡಾಪ್ರೇಮ ಮೆರೆದರು.
ಶಿಕ್ಷಕರು ಕಬ್ಬಡಿ, ಹಗ್ಗಜಗ್ಗಾಟ, ಮತ್ತು ವಾಲಿಬಾಲ್ ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ,ಮಹಿಳಾ ಶಿಕ್ಷಕಿಯರು ಪಾಸಿಂಗ್ ದ ಬಾಲ್, ಥ್ರೋಬಾಲ್ ಮತ್ತು ಹಗ್ಗ ಜಗ್ಗಾಟದಲ್ಲಿ ಶಿಕ್ಷಕಿಯರು  ಪಾಲ್ಗೊಂಡರು.
ಇದೇ ವೇಳೆ ಶಿಕ್ಷಕರಿಗೆ ಏರ್ಪಡಿಸಿದ್ದ ರಸಪ್ರಶ್ನೆ, ಭಾವಗೀತೆ ಹಾಗೂ ದೇಶಭಕ್ತಿ ಸ್ಪರ್ಧೆಗಳಲ್ಲಿ ಶಿಕ್ಷಕರು ಭಾಗವಹಿಸಿ ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು.
ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ
ಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಶಾಲಾ ಶಿಕ್ಷಕರು ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!