ಕ್ರೀಡೆ

ರಾಷ್ಟ್ರ ಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಗೆ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಶಾಲೆ ವಿದ್ಯಾರ್ಥಿಗಳು

ಕುಶಾಲನಗರ ನ 30: ಕರಾಟೆ ಒಳ್ಳೆಯ ಆರೋಗ್ಯ, ಒಳ್ಳೆಯ ಬದುಕು ಮತ್ತು ಜೀವನಕ್ಕೆ ದಾರಿ ದೀಪವಾಗುವಂತಹ ಕ್ರೀಡೆ. ಕರಾಟೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು. ದೈಹಿಕ, ಮಾನಸಿಕ ಸದೃಢತೆಗೆ ಕರಾಟೆ ಅತ್ಯುತ್ತಮವಾಗಿದ್ದು, ಹಂತ ಹಂತವಾಗಿ ಬೆಳೆಯುತ್ತಾ ಬಂದಿದೆ.
ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯು ಶಿವಮೊಗ್ಗದ ನೆಹರು ಒಳಾಂಗಣ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕುಶಾಲನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಕುಶಾಲನಗರದ ಇಂಪನ 14 ವರ್ಷದ ವಯೋಮಿತಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬ್ರಿಜೇಶ್, ಹಾಗೂ ತೆವೀನ್ ದ್ವಿತೀಯ ಸ್ಥಾನ ಪಡೆದರೆ. ಹಿತೇಶ್ ಹಾಗೂ ಮುಕುಂದ್ ತೃತೀಯ ಬಹುಮಾನ ಪಡೆದುಕೊಂಡರು. ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕೊಡಗಿನಿಂದ ಪ್ರತಿನಿಧಿಸಿದ ಕುಶಾಲನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ 11 ವಿದ್ಯಾರ್ಥಿಗಳ ಫೈಕಿ ಸಂಸ್ಥೆಯ ವಿದ್ಯಾರ್ಥಿಗಳು ಒಂದು ಚಿನ್ನದ ಪದಕ, ಎರಡು ಬೆಳ್ಳಿ ಪದಕ, ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಥಮ ಸ್ಥಾನ ಪಡೆದ ಸಂಸ್ಥೆಯ ಇಂಪನಾ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಇವರುಗಳಿಗೆ ಕರಾಟೆ ತರಬೇತುದಾರರಾದ ಸಂಕೇತ್ ತರಬೇತಿಯನ್ನು ನೀಡಿದ್ದರು.
ಈ ವೇಳೆ ಮಾತನಾಡಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಶಾಲೆಯ ತರಬೇತುದಾರ ಸಂಕೇತ್, ಕರಾಟೆ ಎಂಬುದು ಕೇವಲ ಆತ್ಮ ರಕ್ಷಣೆಯ ಕಲೆಯಲ್ಲ, ಇತ್ತೀಚೆಗೆ ಅದು ವಿಭಿನ್ನ ಕಲೆಯಾಗಿ ಹೊರಹೊಮ್ಮುತ್ತಿದೆ, ರಕ್ಷಣೆಯ ವಿಚಾರದಲ್ಲಿ ಪ್ರಸ್ತುತ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಸಮಸ್ಯೆಗಳನ್ನು ಎದುರಿಸಲು ಮಕ್ಕಳನ್ನು ಬಾಲ್ಯದಿಂದಲೇ ತಯಾರಿ ಮಾಡಬೇಕು, ಕರಾಟೆ ಕಲೆ ಸ್ವ ರಕ್ಷಣೆಯ ತಂತ್ರವನ್ನು ಕಲಿಸುವ ಜೊತೆಗೆ, ದೇಶಪ್ರೇಮ, ನಾಯಕತ್ವದ ಗುಣಗಳನ್ನೂ ಸಹ ಬೆಳಸುತ್ತದೆ. ಇಂತಹ ಕಲೆಗಳನ್ನು ಕಲಿಸಲು ಪೋಷಕರು ಮಕ್ಕಳಿಗೆ ಸಹಕಾರ ನೀಡಬೇಕು, ಕರಾಟೆ ಕಲಿಯಲು ವಯಸ್ಸಿನ ಬೇಧವಿಲ್ಲ, ಹೀಗಾಗಿ ದೇಹ ಮತ್ತು ಮನಸ್ಸನ್ನು ಗಟ್ಟಿಗೊಳಿಸಲು ಇದು ಅತ್ಯಂತ ಉಪಯುಕ್ತ ಎಂದರು.
ಇದೇ ಸಂದರ್ಭ ತರಬೇತುದಾರ ಸಂಕೇತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಪೋಷಕರಾದ ಪಿ.ಆರ್.ಬಿದ್ದಪ್ಪ, ಮಹೇಶ್, ರಮೇಶ್, ವಿ.ಕೃಷ್ಣ, ಪಿ.ಬಿ.ಸರಸ್ವತಿ, ಮಮತಾ, ಸುಮಲತಾ, ಅನಿತಾ ಸಂತೋಷ್, ನಳಿನಿ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!