ಕಾರ್ಯಕ್ರಮ

ಲಯನ್ಸ್ ವಲಾಧ್ಯಕ್ಷರ ಭೇಟಿ: ಶಿಕ್ಷಕರ ದಿನಾಚರಣೆ

ಕುಶಾಲನಗರ, ಅ.1: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.
ವಲಯ ಅಧ್ಯಕ್ಷರಾದ ಕೆ.ಎಸ್. ಸತೀಶ್ ಕುಮಾರ್ ಅವರ ಅಧಿಕೃತ ಭೇಟಿಯೊಂದಿಗೆ ನಡೆದ ಸಮಾರಂಭದಲ್ಲಿ ಕೊಡಗು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಗೋಣಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರು ಆಗಿರುವ ಎಚ್‌ಕೆ ಕುಮಾರ್ ಮತ್ತು ಶಿಕ್ಷಕಿಯರಾದ ಪುನಿತಾ ಹೇಮಂತ್ ಮತ್ತು ಅನಿತಾ ಶಿವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧಿಕೃತ ಬೇಟಿ ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಕುಮಾರ್ ಲಯನ್ಸ್ ಸದಸ್ಯರು ನಾಗರಿಕ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿ ಎಸ್ ಸುಮನ್ ಬಾಲಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯದರ್ಶಿಗಳಾದ ಟಿ ಕೆ ರಾಜಶೇಖರ್, ಖಜಾಂಚಿ ನಿತಿನ್ ಗುಪ್ತ, ಸೇರಿದಂತೆ ಪಿರಿಯಾಪಟ್ಟಣ, ಸುಂಟಿಕೊಪ್ಪ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕುಶಾಲನಗರ,ಪಿರಿಯಾಪಟ್ಟಣ, ಸುಂಟಿಕೊಪ್ಪ ಕ್ಲಬ್ ಗಳ ಸದಸ್ಯರುಗಳು ಪಾಲ್ಗೊಂಡಿದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!