ಕುಶಾಲನಗರ, ನ 16
ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಎಸ್. ಡಿ. ಪಿ. ಕೆ. ಫ್ರೆಂಡ್ಸ್ ವತಿಯಿಂದ ರಂಜನ್ ಅವರ ಜ್ಞಾಪಕಾರ್ಥವಾಗಿ ಹಮ್ಮಿಕೊಂಡ ಮೊದಲನೇ ವರ್ಷದ ಹೆಚ್. ವಿ. ಎಲ್, ವಾಲಿಬಾಲ್ ಲೀಗ್ ಮಾದರಿಯ ಪಂದ್ಯಾವಳಿಯು ಹುಲುಸೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಪಂದ್ಯಾವಳಿಗಳು ಲೀಗ್ ಮಾದರಿಯಲ್ಲಿ 8 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಪ್ರಥಮ ಸ್ಥಾನವನ್ನು ಮಲ್ಲೇನಹಳ್ಳಿಯ ಆರ್. ಕೆ.ಸ್ರ್ಟೈಕರ್ ತಂಡ ಪಡೆದುಕೊಂಡಿರು.ದ್ವಿತೀಯ ಬಹುಮಾನ ಹೆಬ್ಬಾಲೆಯ ಟೀಮ್ ಅಗಸ್ತ್ಯ ತಂಡ, ತೃತೀಯ ಸ್ಥಾನ ವನ್ನು ಆಲೂರು ಸಿದ್ದಾಪುರದ ಅಹಲ್ಯ ಫ್ರೆಂಡ್ಸ್ ತಂಡ, ಚತುರ್ಥ ಸ್ಥಾನವನ್ನು ಹುಲುಸೆಯ ಡಿ.ಎನ್. ಬ್ಲಾಸ್ಟರ್ ತಂಡ ಪಡೆದುಕೊಂಡಿತು ಕ್ರೀಡಾಕೂಟದ ಉದ್ಘಾಟನೆಯನ್ನು ಹೆಬ್ಬಾಲೆಯ ಕಾಂಗ್ರೆಸ್ ಮುಖಂಡ ನಟೇಶ್ ಗೌಡ ನೆರವೇರಿಸಿದರು.
ಕಾಂಗ್ರೆಸ್ ಮುಖಂಡ ಮಿಥನ್ ಗೌಡ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪ್ಪಳ್ಳಿ ರವೀಂದ್ರ, ಎಸ್. ಡಿ. ಪಿ.ಕೆ. ಫ್ರೆಂಡ್ಸ್ ಸಂಘದ ಅಯೋಜಕ ಪ್ರಮೋದ್, ಕಿರಣ್, ದಿಲೀಪ್, ಸುಮಂತ್, ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.
Back to top button
error: Content is protected !!