ಕುಶಾಲನಗರ ಸೆ 09: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ರಾಜ್ಯ ಮಟ್ಟದ ಹಾಕಿ ಪಂದ್ಯಾಟವು ಕೂಡಿಗೆ ಕ್ರೀಡಾ ಶಾಲೆಯ ನೂತನ ಹಾಕಿ ಮೈದಾನದಲ್ಲಿ ಆರಂಭಗೊಂಡಿದೆ.
ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ವಿಭಾಗ ಮಟ್ಟದಲ್ಲಿ ವಿಜೇತ ತಂಡಗಳು ಭಾಗವಹಿಸಿವೆ. ರಾಜ್ಯ ಮಟ್ಟದ 5 ವಿಭಾಗಗಳಾದ ಬೆಂಗಳೂರು, ಮೈಸೂರು, ಗುಲ್ಬರ್ಗ, ಬೆಳಗಾವಿ, ಕೂಡಿಗೆ ಕ್ರೀಡಾ ಶಾಲೆಯ ತಂಡಗಳು ಸೆಣಸಲಿವೆ.
ಪಂದ್ಯಾವಳಿಗಳು ಲೀಗ್ ಮಾದರಿಯಲ್ಲಿ ಮೂರು ದಿನಗಳವರೆಗೆ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ವಿಜೇತ ತಂಡವು ರಾಷ್ಟ ಮಟ್ಟದ ಹಾಕಿ ಪಂದ್ಯಕ್ಕೆ ಅಯ್ಕೆಗೊಳ್ಳಲಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಅಧಿಕಾರಿ ಡಾ. ಸದಾಶಿವ ಎಸ್ ಪಲ್ಲೇದ್ ಮಾಹಿತಿ ನೀಡಿದರು. ರಾಷ್ಟ್ರದ ಮಟ್ಟದ ಪಂದ್ಯಾಟವು ಗ್ವಾಲೀಯರ್ ನಲ್ಲಿ ನಡೆಯಲಿದೆ.
ಪಂದ್ಯಾವಳಿಗಳ ತೀರ್ಪುಗಾರರಾಗಿ ಡ್ಯಾನಿ ಈರಪ್ಪ, ಡ್ಯಾನಿ ದೇವಯ್ಯ, ನಾಣಯ್ಯ, ಆದರ್ಶ್, ತಮ್ಮಯ್ಯ, ಅಯ್ಯಪ್ಪ, ಚಿಣ್ಣಪ್ಪ, ರತೀಶ್, ರಮಾನಂದ, ಪ್ರವೀಣಾ, ಪಾಲಾಕ್ಷ ಸೇರಿದಂತೆ ವಿವಿಧ ಸಮಿತಿಯ ಜವಾಬ್ದಾರಿ ಹೊತ್ತಿದ್ದ ದೈಹಿಕ ಶಿಕ್ಷಣರು ಇದ್ದರು.
Back to top button
error: Content is protected !!