ಕಾಮಗಾರಿ

ಕೂಡಿಗೆಯ ಮೇಕೆ ಹಾಲು ಘಟಕಕ್ಕೆ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

ಕುಶಾಲನಗರ ಸೆ 09: ಕೂಡಿಗೆಯಲ್ಲಿ ಮೇಕೆ ಹಾಲು ಘಟಕಕ್ಕೆ ರಾಜ್ಯ ಕುರಿ ಉಣ್ಣೆ ನಿಗಮದ ರಾಜ್ಯ ವ್ಯವಸ್ಥಾಪಕ‌ ನಿರ್ದೇಶಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
1.88 ಕೋಟಿ ವೆಚ್ಚದಲ್ಲಿ ಕಟ್ಟಡ ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳು ಈಗಾಗಲೆ ಪೂರ್ಣಗೊಂಡಿದ್ದು ಪಶುಪಾಲನಾ ಇಲಾಖೆ ಈ ಘಟಕವನ್ನು ಕುರಿ ಮತ್ತು ಉಣ್ಣೆ ನಿಗಮಕ್ಕೆ ವಹಿಸಲಾಗಿದ್ದು, ಈ ಹಿನ್ನಲೆಯಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಯೋಜನೆಗಳನ್ನು ಕೈಗೊಂಡು ಅಭಿವೃದ್ಧಿಪಡಿಸುವ ಉದ್ದೇಶದಿಂದ ವ್ಯವಸ್ಥಾಪಕ ನಿರ್ದೇಶಕ ಶಿವಣ್ಣ
ಮತ್ತು ವಿಭಾಗ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡಿತು.
ಈ ಕೇಂದ್ರವು ಕಳೆದ 7 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಈಗಾಗಲೆ ಕಟ್ಟಡ ಒಳಗೊಂಡಂತೆ ಮೇಕೆ ಹಾಲು ಸಂಸ್ಕರಣಕ್ಕೆ ಬೇಕಾಗುವ ಶಿಥಲೀಕರಣ ಕೇಂದ್ರ, ಮೇಕೆಗೆ ಹುಲ್ಲು ಸಂಗ್ರಹಣಾ ಘಟಕ ಅದಕ್ಕೆ ಸಂಬಂಧಪಟ್ಟಂತಹ ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ಕುರಿ ಮತ್ತು ಉಣ್ಣೆ ನಿಗಮದ ಮುಖಾಂತರ ನಡೆದಿದೆ.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೇ ಪ್ರಥಮವಾಗಿರುವ ಮೇಕೆ ಹಾಲು ಘಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಎಲ್ಲಾ ರೀತಿಯ ಸಹಕಾರ ನೀಡುತ್ತಿರುವ ಹಿನ್ನಲೆಯಲ್ಲಿ ರೈತರಿಗೆ ಅನುಕೂಲವಾಗಲು  ಮೇಕೆ  ಹಾಗೂ ಕುರಿಗಳನ್ನು ಅಭಿವೃದ್ಧಿಪಡಿಸುವ ಹಿನ್ನಲೆಯಲ್ಲಿ ನಿಗಮದ ಮೂಲಕ ಎಲ್ಲಾ ರೀತಿಯ ಕಾರ್ಯಸೂಚಿ ಯೋಜನೆಗಳನ್ನು ಕೈಗೊಳ್ಳಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಕೊಡಗು ಜಿಲ್ಲೆಯಲ್ಲಿ ಪ್ರಥಮವಾಗಿ ಈ ಯೋಜನೆ ಅಭಿವೃದ್ಧಿ ಪಡಿಸಲು ಮುಂದಾಗುತ್ತೇವೆ ಎಂದರು.
ಈಗಾಗಲೆ ಕಾದಿರಿಸಿರುವ 112 ಎಕರೆ ಪ್ರದೇಶದ ಜಾಗವು ಕಾಡಾನೆಗಳಿಂದ ಬೇಲಿ ಹಾನಿಯಾಗಿದ್ದು, ಬೇಲಿ, ತಡೆಗೋಡೆ ಸರಪಡಿಸಿ ಮೇಕೆಗಳಿಗೆ ಬೇಕಾಗುವ ಹುಲ್ಲುಗಳನ್ನು ಬೆಳೆಸುವುದು ಮತ್ತು ಮೇಕೆಗಳನ್ನು ಖರೀದಿಸಲು ರಾಜ್ಯಮಟ್ಟದ ಸಮಿತಿ ರಚಿಸಿ ಈ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಮೇಕೆಗಳನ್ನು ಖರೀದಿಸಿ ಬ್ಯಾಡಗೊಟ್ಟ‌ ಕೇಂದ್ರದಲ್ಲಿ ಸಾಕಾಣಿಕೆ ಮಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭ ಮೈಸೂರು-ಕೊಡಗು ಕುರಿ ಉಣ್ಣೆ ನಿಗಮದ ನಿರ್ದೇಶಕ ಡಾ.ನಾಗರಾಜ್, ಇಲಾಖೆಯ ರಾಜೇಗೌಡ, ಕೊಡಗು ಜಿಲ್ಲೆಯ ಕುರಿ ಮತ್ತು ಉಣ್ಣೆ ಸಹಕಾರ ನಿಗಮದ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್ ಮತ್ತು ನಿರ್ದೇಶಕರಾದ ಉದಯಕುಮಾರ್, ಕಾರ್ಯದರ್ಶಿ ಭರಮಣ್ಣ ಬೆಟಗೇರಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us