ಕುಶಾಲನಗರ ಸೆ 5 : ಇಲ್ಲಿಗೆ ಸಮೀಪದ ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆಯ ವಿದ್ಯಾರ್ಥಿಗಳಾದ ನೇಹ ಅನೀಶ್ ಹಾಗೂ ಡೆಲೀಶಾ ಮುತ್ತಮ್ಮ ಜೋಡಿ ಷಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಶಾಲನಗರದ ಜಂಪ್ ಸ್ಮಾಷ್ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ತೋರುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನೇಹ ಅನೀಶ್ ಕೊಡಗರಹಳ್ಳಿ ಶಾಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಡೆಲೀಶಾ ಸಿಂಗಲ್ಸ್ ನಲ್ಲೂ ಉತ್ತಮ ಸಾಧನೆ ತೋರಿದ್ದು 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ.
ಕ್ರೀಡಾ ವಿಜೇತರಿಗೆ ದೈಹಿಕ ಶಿಕ್ಷಕ ಸುರೇಶ್ ಹಾಗೂ ಸುನಿಲ್ ಬಹುಮಾನ ವಿತರಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕಿ ಮೇರಿ ಫ್ಯಾಟಿಮಾ ಅಭಿನಂದನೆಗಳನ್ನು ತಿಳಿಸಿದ್ದಾರೆ.
Back to top button
error: Content is protected !!