ಕುಶಾಲನಗರ, ಆ 23: ಕೊಡಗು ವಿಶ್ವವಿದ್ಯಾಲಯ ನೂತನ ಕುಲ ಸಚಿವರಾಗಿ (ಮೌಲ್ಯಮಾಪನ) ಪ್ರೊಫೆಸರ್ ಎಂ ಸುರೇಶ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ವಿವಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಉತ್ತಮ ವಾತಾವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ನಿರ್ಮಾಣವಾಗಿದ್ದು ಈ ವಿಶ್ವವಿದ್ಯಾಲಯವನ್ನು ರಾಜ್ಯಕ್ಕೆ ಮಾದರಿ ವಿಶ್ವವಿದ್ಯಾಲಯ ಮಾಡುವ ಕಲ್ಪನೆ ನಮ್ಮ ನಿಮ್ಮೆಲ್ಲರ ಮೇಲಿದೆ, ಕೊಡಗಿನಲ್ಲಿ ರಾಜ ಮಹಾರಾಜರು ಆಳಿದ ಸಂದರ್ಭದಲ್ಲಿ ಕೊಡಗಿನಲ್ಲಿ ಕೋಟೆ ಮತ್ತು ಕೊಡಗು ಜಿಲ್ಲೆಯನ್ನ ಹೇಗೆ ಸಮೃದ್ಧಿ ಆಗಿ ಇಟ್ಟಿದರೋ ಹಾಗೆ ಕೊಡಗು ವಿಶ್ವವಿದ್ಯಾಲಯವನ್ನು ಇನ್ನಷ್ಟು ಬಲಿಷ್ಠ ಮತ್ತು ಉತ್ತಮ ಶಿಕ್ಷಣ ಕೊಡುವ ಸಂಕಲ್ಪ ಮಾಡುತ್ತೇನೆ ಅದಕ್ಕೆ ಎಲ್ಲಾ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳು ಸಹಕಾರ ನೀಡಿ ಕನಸು ನನಸು ಮಾಡಬೇಕು ಎಂದರು.
ನಂತರ ಮಾತನಾಡಿದ ನಿರ್ಗಮಿತ ಕುಲ ಸಚಿವರಾದ ಡಾ. ಸೀನಪ್ಪ ಕೊಡಗು ಜನರ ಆಶೋತ್ತರ ಹಾಗೂ ಕನಸನ್ನು ಸಕಾರ ಗೊಳಿಸಲು ಸಾಕಷ್ಟು ಪ್ರಯತ್ನ ಪಡುವ ಕೆಲಸ ಮಾಡಿದ್ದೇವೆ. ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳ ಸಹಕಾರದಿಂದ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದರು.
ಇದೇ ಸಂದರ್ಭ ನಿರ್ಗಮಿತ ಕುಲಸಚಿವರಾದ ಡಾ. ಸೀನಪ್ಪ ಅವರು ನೂತನ ಕುಲ ಸಚಿವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಸಂದರ್ಭ FMKC ಪ್ರಾಂಶುಪಾಲರಾದ ಡಾ. ರಾಘವನ್, ಸಹಾಯಕ ಪ್ರಧ್ಯಾಪಕರಾದ ರವಿಶಂಕರ್ ಎಂ.ಎನ್, ಡಾ. ತಿಪ್ಪೇ ಸ್ವಾಮಿ, ಡಾ ನಾಗರಾಜ್ ಕೆ.ಟಿ, ಡಾ. ಎಂ ಪಿ ಕೃಷ್ಣ, ಡಾ. ಅರುಣ್ ಕುಮಾರ,ಗೀತಾಂಜಲಿ ಅರ್ಪಿತಾ, ಗಗನ್,ಸಿಬ್ಬಂದಿ ವರ್ಗದವರು,ಉಪಸ್ಥಿತರಿದ್ದರು
Back to top button
error: Content is protected !!