ಟ್ರೆಂಡಿಂಗ್

ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಗ್ರೀನ್ ಅವಾರ್ಡ್ ಪ್ರಶಸ್ತಿ

ಕುಶಾಲನಗರ, ಆ 11: ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಗ್ರೀನ್ ಅಂಡ್ ಗ್ರೀನ್ ಎಂಬ ಅಂತರರಾಷ್ಟ್ರೀಯಾ ಸಂಸ್ಥೆಯು ಕೊಡಮಾಡುವ ಗ್ರೀನ್ ಅವಾರ್ಡ್ ಪ್ರಶಸ್ತಿಗೆ ಭಾಜನವಾಗಿದೆ.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ಗಿರಿಜನರ ಹಾಡಿಗೆ ಹೊಂದಿಕೊಂಡಂತೆ ಇರುವ ಸುಮಾರು 10 ಎಕರೆ ವಿಶಾಲ ಪ್ರದೇಶದಲ್ಲಿ ಕಳೆದ ಎರಡೂವರೆ ದಶಕಗಳ ಹಿಂದೆ ಆರಂಭವಾದ ಈ ವಸತಿ ಶಾಲೆಯಲ್ಲಿ ಗ್ರಾಮೀಣ ಪ್ರದೇಶಗಳ 250 ಮಂದಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾ ಬಂದಿದ್ದು ಇಲ್ಲಿಯವರೆಗೆ ಹತ್ತಾರು ಸಾವಿರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.
ಶಾಲೆಯಲ್ಲಿನ ವಿಶಾಲ ಪ್ರದೇಶವನ್ನು ಹಸಿರು ಪರಿಸರವಾಗಿ ರೂಪಿಸುವ ಪಣ ತೊಟ್ಟ ಶಾಲಾ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಶಾಲಾ ಪರಿಸರದಲ್ಲಿ ನೂರಾರು ಸಂಖ್ಯೆಯ ಪರಿಸರ ಸ್ನೇಹಿ ಗಿಡಗಳನ್ನು ನೆಟ್ಟು ಪೋಷಿಸಿ ಮರಗಳನ್ನಾಗಿಸಿರುವುದು ಹಾಗೂ ಶಾಲೆಯ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆ, ಪ್ರಾಂಶುಪಾಲರು ಹಾಗೂ ಬೋಧಕರಲ್ಲಿ ಅತ್ಯುತ್ತಮ ಹೊಂದಾಣಿಕೆ ಸೇರಿದಂತೆ ವಿವಿಧ ಆಯಾಮಗಳನ್ನು ಪರಿಶೋಧಿಸಿ ಶಾಲೆಗೆ ಗ್ರೀನ್ ಅಂಡ್ ಗ್ರೀನ್ ಅವಾರ್ಡ್ ನೀಡಲಾಗುತ್ತಿದೆ ಎಂದು ಗ್ರೀನ್ ಅಂಡ್ ಗ್ರೀನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಚ್ಚಿದಾನಂದ ಜಮದಗ್ನಿ ತಿಳಿಸಿದರು.
ಇದೇ ಸಂದರ್ಭ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೂ ಮುನ್ನಾ ಗ್ರೀನ್ ಅಂಡ್ ಗ್ರೀನ್ ಸಂಸ್ಥೆ ಹಾಗೂ ಶಾಲೆಯ ವತಿಯಿಂದ ಶಾಲಾ ಪರಿಸರದಲ್ಲಿ ಮತ್ತೆ 150 ಗಿಡಗಳನ್ನು ನೆಡಲಾಯಿತು.
ನಂತರ ಶಾಲಾ ವಿದ್ಯಾರ್ಥಿಗಳೊಂದಿಗೆ ಸಚ್ಚಿದಾನಂದ ಜಮದಗ್ನಿ ಗಿಡ ಮರಗಳು ಹಾಗೂ ಪರಿಸರ ಕುರಿತಾಗಿ ಸಂವಾದ ನಡೆಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಎಸ್.ಎಸ್.ಶ್ರೀದೇವಿ, ಗ್ರೀನ್ ಅಂಡ್ ಗ್ರೀನ್ ಸಂಸ್ಥೆಯು ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು ಇದರ ಮುಖ್ಯಸ್ಥರು ವಿಶ್ವಸಂಸ್ಥೆಯ ಸದಸ್ಯರೂ ಆಗಿದ್ದಾರೆ.
ಇಂತಹ ಸಂಸ್ಥೆ ನಮ್ಮ ಶಾಲೆಯ ಬಗ್ಗೆ ಮಾಹಿತಿ ಪಡೆದು ಖುದ್ದಾಗಿ ಬಂದು ಎಲ್ಲವನ್ನು ಅವಲೋಕಿಸಿ ಇಂತಹ ಪ್ರಶಸ್ತಿ ನೀಡಿರುವುದು ನಮಗೆ ಹೆಮ್ಮೆ ತಂದಿದೆ. ಹಾಗೆಯೇ
ಇನ್ನಷ್ಟು ಪರಿಸರ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲು ಸಹಾಯಕವಾಗಿದೆ.
ಸಂಸ್ಥೆಗೆ ಸಿಕ್ಕಿರುವ ಬಹುಮಾನದ ಹಿಂದೆ ಹಿಂದಿನ ಪ್ರಾಂಶುಪಾಲರಾದ ಕೆ.ವಿ.ಸುರೇಶ್ ಹಾಗೂ ಚಂದ್ರಶೇಖರರೆಡ್ಡಿ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರ ಶ್ರಮವನ್ನು ಸ್ಮರಿಸಲಾಗುತ್ತಿದೆ ಎಂದು ಶ್ರೀದೇವಿ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರೀನ್ ಅಂಡ್ ಗ್ರೀನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಕೆ.ಆರ್.ರಮೇಶ್, ಪುಟ್ಟರಾಜು, ಜಗದೀಶ್ ಇದ್ದರು.
ಉಪನ್ಯಾಸಕ ಶಿವಕುಮಾರ್ ಸ್ವಾಗತಿಸಿದರು.
ಶಿಕ್ಷಕ ಗಿರೀಶ್ ವಂದಿಸಿದರು.
ರಮೇಶ್ ನಿರೂಪಿಸಿದರು.
ವರದಿ : ಕೆ.ಎಸ್.ಮೂರ್ತಿ

Related Articles

Leave a Reply

Your email address will not be published. Required fields are marked *

Back to top button
error: Content is protected !!