ಪ್ರಕಟಣೆ

ಆಗಸ್ಟ್ 15ಕ್ಕೆ ಕೈಗೆ ಕಪ್ಪು ಬಟ್ಟೆ ಧರಿಸಿ ಕರಾಳ ಸ್ವತಂತ್ರ ದಿನ ಆಚರಣೆ

ಕುಶಾಲನಗರ, ಆ 11:
ಕಳೆದ ಐದು ವರ್ಷಗಳಿ೦ದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶ ಹೊರಡಿಸಿ ಅನುದಾನ ರಹಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಮಲತಾಯಿ ಮಕಳಂತೆ ನೋಡಿಕೊಳ್ಳುತ್ತಿದೆ. *ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ವಾತಂತ್ರ್ಯ ಹರಣ ಮಾಡುವ ಜೊತೆಗೆ ಅವೈಜ್ಞಾನಿಕ ನಿಯಮಗಳನ್ನು ಜಾರಿಯಾಗಿದ್ದನ್ನು ಖಂಡಿಸಿ ಆ.15 ರಂದು ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಆಡಳಿತ ಮಂಡಳಿಯ ಮುಖ್ಯಸ್ಥರು, ಶಿಕ್ಷಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರಾಳ ಸ್ವತಂತ್ರ ದಿನಾಚರಣೆ ದಿನವಾಗಿ ಆಚರಿಸಲಾಗುವುದು ಎಂದು ಕೊಡಗು ಜಿಲ್ಲಾ ಅನುದಾನರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಘಟಕದ ಜಿಲ್ಲಾಧ್ಯಕ್ಷ ಜರು ಗಣಪತಿ ರವರು ತಿಳಿಸಿದ್ದಾರೆ.* ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿವರ್ಷ ಮಾನ್ಯತೆ ನವೀಕರಣ ಮಾಡುತ್ತಿರುವುದರಿಂದ ಶಾಲಾ ಆಡಳಿತ ಮಂಡಳಿಗೆ ಹೊರೆ ಆಗಿರುತ್ತದೆ, ಇದರ ಜೊತೆ ಭೂ ಪರಿವರ್ತನೆ, ಶಾಲಾ ಕಟ್ಟಡ ತೆರಿಗೆ, RTE ಮರು ಪಾವತಿ ವಿಳಂಬ ಇವೆಲ್ಲಾ ತೊಂದರೆಗಳು ಇವೆ. ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಆದೇಶ ಮಾಡಿಸಿದ್ದರೂ ನಿಯಮದ ಹೆಸರಿನಲ್ಲಿ ಅಲೆದಾಡಿಸುವುದು, ವಿಳಂಭ ಧೋರಣೆ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹಿಂಸೆ ನೀಡಲಾಗುತ್ತಿದೆ. ಖಾಸಗಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗುವ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಇದರ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದರೂ ಸರ್ಕಾರ ಕಳೆದ ಸರ್ಕಾರದ ಅಧಿಕಾರಿಗಳನ್ನೇ ಮುಂದುವರಿಸಲಾಗಿದೆ. ನಮ್ಮ ಸಂಸ್ಥೆಗಳ ಹಿತ ರಕ್ಷಣೆ ಕಾಪಾಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ. ಶಿಕ್ಷಣ ಇಲಾಖೆಯು ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತರುತ್ತಿದೆ ಎಂದು ತಿಳಿಸಿದ್ದಾರೆ. ಒಂದು ಕಡೆ ಮಕ್ಕಳ ಭವಿಷ್ಯ ಇನ್ನೊಂದೆಡೆ ಶಿಕ್ಷಣ ಸಂಸ್ಥೆಗಳ ಅಳಿವು-ಉಳಿವು ನೋಡಿಕೊಳ್ಳಬೇಕಿದೆ. ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಆಗುತ್ತಿರುವ ಶೋಷಣೆ ಕುರಿತು ಸಾಮಾಜಿಕ ಜಾಲತಾಣ, ಬಿತ್ತಿ ಪತ್ರ, ಬ್ಯಾನರ್‌ಗಳ ಮೂಲಕ ಸಾರ್ವಜನಿಕರಿಗೆ, ಪಾಲಕರಿಗೆ, ಬುದ್ದಿಜೀವಿಗಳಿಗೆ ಜಾಗೃತಿ ಮೂಡಿಸಲಾಗುವುದು. ನಮ್ಮ ಸಂಸ್ಥೆಗಳ ಉಳಿವಿಗಾಗಿ ನಿರಂತರ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ. ರಾಜ್ಯದ ಸಂಘಟನೆಗೆ ಕೊಡಗು ಜಿಲ್ಲೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು .
ಸಂಘಟನೆಯ ಉಪಾಧ್ಯಕ್ಷರಾದ ದಾಮೋದರ್ , ಕಾನೂನು ಸಲಹೆಗಾರರಾದ ಎಂ.ಎಸ್.ಪೂವಯ್ಯ,
KAMS ಪ್ರತಿನಿಧಿ ಸುಜಲಾದೇವಿ ಹಾಗು ಪ್ರಧಾನ ಕಾರ್ಯದರ್ಶಿಯಾದ ಕೊಟ್ರಂಗಡ ತಿಮ್ಮಯ್ಯ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!