ಸನ್ಮಾನ

ತೊರೆನೂರು ಸೂರ್ಯೋದಯ ಪುರುಷರ ಸ್ವಸಹಾಯ ಸಂಘದಿಂದ ಶಿಕ್ಷಕರಿಗೆ ಸನ್ಮಾನ

ಕುಶಾಲನಗರ, ಆ 15: ತೊರೆನೂರಿನ ಸೂರ್ಯೋದಯ ಪುರುಷರ ಸ್ವಸಹಾಯ ಸಂಘದಿಂದ ಶೇ.100 ಫಲಿತಾಂಶ ಪಡೆದ ತೊರೆನೂರು ಸರಕಾರಿ ಪ್ರೌಢಶಾಲಾ ಶಿಕ್ಷಕ ವೃಂದದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸ್ವಾತಂತ್ರೋತ್ಸವ ಅಂಗವಾಗಿ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ‌ ನಿವೃತ್ತರಾದ ಸೋಮಾಚಾರಿ, ಸೋಮಶೇಖರ್, ಅಂತರಾಷ್ಟ್ರೀಯ ಕ್ರೀಡಾಪಟು ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಪ್ರಮುಖ ಕೆ.ಎಸ್.ಕೃಷ್ಣೇಗೌಡ, ಪುರುಷರ ಸ್ವಸಹಾಯ ಸಂಘ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ದೈನಂದಿನ ಕೆಲಸಗಳ‌ ಒತ್ತಡದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯತ್ತ ಗಮನಹರಿಸಲು ಪೋಷಕರಿಗೆ ಸಮಯ ದೊರೆಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕ ವೃಂದ ವಿಶೇಷ ಕಾಳಜಿ ವಹಿಸಿ ಅವರ ಸರ್ವತೋಮುಖ‌ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಶೈಕ್ಷಣಿಕವಾಗಿ ಉತ್ತಮ ಫಲಿತಾಂಶಕ್ಕೆ‌ ಕಾರಣರಾದ ಶಿಕ್ಷಕ ವೃಂದವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಮಾತನಾಡಿ, ಬಸ್ ಸೌಕರ್ಯವಿಲ್ಲದೆ ಆಟೋದಲ್ಲಿ‌ ಸಂಚರಿಸುತ್ತಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆಯಲ್ಲಿರುವುದು ತೀವ್ರ ವಿಷಾದಕರ ಸಂಗತಿ. ಗಾಯಾಳು ವಿದ್ಯಾರ್ಥಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಅವರು ಹಾರೈಸಿದರು. ಅಪಘಾತದ ಬಳಿಕ ಕೂಡಲೆ ಬಸ್ ವ್ಯವಸ್ಥೆ ಒದಗಿಸಿದ ಕ್ಷೇತ್ರ ಶಾಸಕರ ಕಾಳಜಿಗೆ ಅಭಿನಂದಿಸಿದರು.
ಸಂಘದ ಸದಸ್ಯ ಟಿ.ಕೆ.ಪಾಂಡುರಂಗ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಸಹಾಯ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಒದಗಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ರೂಪಾ ಮಹೇಶ್, ಸಂಘದ ಕಾರ್ಯದರ್ಶಿ ಟಿ.ಎಚ್.ಸೋಮಾಚಾರ್, ಸದಸ್ಯರಾದ ಎಚ್.ಬಿ.ಚಂದ್ರಪ್ಪ, ಟಿ.ಪಿ.ಮಂಜುನಾಥ್, ಟಿ.ಎಸ್.ರಾಜಶೇಖರ್, ಟಿ.ಬಿ.ಚಿದಾನಂದ, ಡಿ.ಆರ್.ಪ್ರೇಮ್ ಕುಮಾರ್, ಟಿ.ಜೆ.ಶೇಷಪ್ಪ, ಟಿ.ಸಿ.ತ್ರಿನೇಶ್, ಟಿ.ಪಿ.ಸೋಮಶೇಖರ್, ಪ್ರೌಢಶಾಲಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಕಾಮಾಕ್ಷಿ, ಸತ್ಯನಾರಾಯಣ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!