ಸನ್ಮಾನ

ನಂಜರಾಯಪಟ್ಟಣ: ಗ್ರಾಮೀಣ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ

ಕುಶಾಲನಗರ, ಜ 27: ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ‌ದ ಸಮಾರೋಪ ಸಮಾರಂಭ ನಡೆಯಿತು.

ಎರಡು ದಿನಗಳು ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಭಾಗಿಯಾಗಿ ಸಂಭ್ರಮಿಸಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷರೂ ಆದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಎಲ್.ವಿಶ್ವ ಗಣರಾಜ್ಯೋತ್ಸವ ಅಂಗವಾಗಿ ಶುಭ ಕೋರಿದರು. ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕಿದೆ. ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಕ್ರೀಡಾಕೂಟಗಳಿಗೆ ಹೆಸರಾದ ನಂಜರಾಯಪಟ್ಟಣ ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತವಾದ ಕ್ರೀಡಾಕೂಟ ಹಮ್ಮಿಕೊಳ್ಳದೆ ಸರ್ವ ಧರ್ಮೀಯರ, ಸಮುದಾಯದವರ ಸಮ್ಮಿಲನಕ್ಕೆ ಸಾಕ್ಷಿಯಾಗುವ ಚಟುವಟಿಕೆಗಳನ್ನು ಇದುವರೆಗೆ ಹಮ್ಮಿಕೊಳ್ಳುತ್ತಾ ಬರುವ ಮೂಲಕ ಸಾಮರಸ್ಯ‌ ಮಹತ್ವ ಸಾರುತ್ತಿದ್ದಾರೆ.
ಎಲ್ಲಾ ಕಾರ್ಯಕ್ರಮಗಳ ಯಶಸ್ಸಿನಲ್ಲಿ ದಾನಿಗಳ ಪಾತ್ರ ಪ್ರಮುಖವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಭಾಗದ ಎರಡು ಶಾಲೆಗಳನ್ನು ಒಂದು ಶಾಲೆಯಾಗಿಸುವ ಸರಕಾರ ಯೋಜನೆಗೆ ನಮ್ಮ ಧಿಕ್ಕಾರವಿದೆ. ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆ ನಡೆಯಲು ಬಿಡುವುದಿಲ್ಲ ಎಂದರು.

ವೇದಿಕೆಯಲ್ಲಿದ್ದ ಗಣ್ಯರು ಕ್ರೀಡಾಕೂಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿ.ಎಲ್.ವಿಶ್ವ, ಟಿ.ಕೆ.ಸೋಮನ್, ಟಿ.ಕೆ.ರಘು, ಸಚಿನ್ ನಿಂಬಾಳ್ಕರ್, ಹಡ್ಳಳ್ಳಿ ರುದ್ರಪ್ಪ, ರೇಣುಕಾ ಪ್ರೇಮಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕ್ರೀಡಾಕೂಟ ಅಂಗವಾಗಿ ನಡೆದ
ಲಕ್ಕಿ ಡಿಪ್ ನ ವಿಜೇತರಿಗೆ 5 ಕೆಜಿ ಕೋಳಿ ವಿತರಿಸಲಾಯಿತು.

ಶಾಲಾ ಶಿಕ್ಷಕಿ ಮೀನಾಕ್ಷಿ ವಾರ್ಷಿಕ ಶಾಲಾ ವರದಿ ವಾಚಿಸಿದರು.

ಕ್ರೀಡಾಕೂಟ ವಿಜೇತರಿಗೆ‌ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ನಂಜರಾಯಪಟ್ಟಣ ಗ್ರಾಪಂ ಉಪಾಧ್ಯಕ್ಷೆ ಕುಸುಮಾ, ಸದಸ್ಯೆ ಸಮೀರಾ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ಮಿನಿ,‌ ಹಳೆ ವಿದ್ಯಾರ್ಥಿಗಳಾದ
ಟಿ.ಕೆ.ಸೋಮನ್, ಟಿ.ಕೆ. ರಘು ರುದ್ರಪ್ಪ, ಕೆದಂಬಾಡಿ ಚೇತನ್,
ಕಾಳಯ್ಯ, ರವಿ ಬೆಳ್ಯಪ್ಪ,
ಮಾಜಿ ಸೈನಿಕ‌ ಮುಸ್ತಾಫ, ಡಿ.ಆರ್.ಎಫ್.ಒ ಸಚಿನ್ ನಿಂಬಾಳ್ಕರ್, ಇಸಿಒ ಯಾದಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ, ಮುಖ್ಯ ಶಿಕ್ಷಕಿ ಸರಳಾ ರಾಣಿ,
ದಾನಿಗಳಾದ ಗಣಪತಿ, ಅಮೀರ್, ಕೋಟುಮಾಡ ಪವನ್,
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಾಥ್ಯು, ಖಜಾಂಚಿ
ಹ್ಯಾರಿಸ್,‌ ಗ್ರಾಪಂ‌ ಮಾಜಿ ಸದಸ್ಯ ಸುಮೇಶ್ ಸೇರಿದಂತೆ ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳು, ಶಿಕ್ಷಕ ವೃಂದದವರು, ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!