ಸನ್ಮಾನ

ರಾಷ್ಟ್ರಮಟ್ಟದ ಹಾಕಿಯಲ್ಲಿ ಬೆಳ್ಳಿ ಪದಕ ವಿಜೇತ ತ್ರಿಶೂಲ್ ಅವರಿಗೆ ಕರವೇ ಯಿಂದ ಸನ್ಮಾನ

ಕುಶಾಲನಗರ, ಜ 10: ಟಿ.ಎ.ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಮಟ್ಟದ  ಸಭೆಯಲ್ಲಿ ಕರವೇ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಹಾನಗಲ್ ರೂಪ ಗಣೇಶ ಅವರ ಸುಪುತ್ರ ತ್ರಿಶೂಲ್ ಗಣಪತಿ ಅವರನ್ನು‌ ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರಮಟ್ಟದ ಹಾಕಿಯಲ್ಲಿ ಬೆಳ್ಳಿ ಪದಕವನ್ನು ಪಡೆದ ಪ್ರತಿಭೆ ತ್ರಿಶೂಲ್ ಅವರಿಗೆ ಪ್ರವಾಸಿ ಮಂದಿರದಲ್ಲಿ ಕರವೇ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಜಿಲ್ಲಾಧ್ಯಕ್ಷ ಕೆ.ಪಿ. ರಾಜು, ಪ್ರಧಾನ ಕಾರ್ಯದರ್ಶಿ ರವಿ ಅಜ್ಜಳ್ಳಿ, ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಕುದುಪಜೆ, ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ, ಮಡಿಕೇರಿ ಕ್ಷೇತ್ರ ಅಧ್ಯಕ್ಷ ಕನ್ನಡಿಗ ಆನಂದ್ ಗೌಡ, ಕ್ಷೇತ್ರ ನೂತನ ಪ್ರಧಾನ ಕಾರ್ಯದರ್ಶಿ ಮುರುಳಿ, ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ, ಮಹಿಳಾ ತಾಲೂಕು ಅಧ್ಯಕ್ಷ ಹಾನಗಲ್ ರೂಪ ಗಣೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿಂಧುಕುಮಾರ್ ಆರ್ ದೇವಾಂಗ ನಗರಾಧ್ಯಕ್ಷ ಡಿಆರ್ ಯೋಗೇಶ್ ಉಪಾಧ್ಯಕ್ಷರು ಡಿ ಎನ್ ರವಿ ನಗರ ಮಹಿಳಾಧ್ಯಕ್ಷೆ ಅನಿತಾ ದೇವಾಂಗ ಹೋಬಳಿ ಅಧ್ಯಕ್ಷ ರಾಜೇಶ್ ಮಹಿಳಾ ಹೋಬಳಿ ಅಧ್ಯಕ್ಷ ಗೀತಾ ರಾಜೇಶ್ ನೂತನವಾಗಿ ಆಯ್ಕೆಯಾದ ನಗರ ಪ್ರಧಾನ ಕಾರ್ಯದರ್ಶಿ ಮಮತಾ ತಾಲೂಕು ಕಾರ್ಯದರ್ಶಿ ರಾಕೇಶ್ ಪಿಬಿ ನಗರ ಕಾರ್ಯದರ್ಶಿ ಹೇಮಂತ್ ಹಾಗೂ ಸದಸ್ಯರು ವಸಂತ ಪೂಜಾರಿ ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!