ಕುಶಾಲನಗರ, ಮಾ 15: 26ನೇ ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದಿದೆ.ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹರಿಯಾಣದ ಪನಚಕುಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕೊಡಗಿನ ದರ್ಶನ್ ನಾಯಕತ್ವದ ಕರ್ನಾಟಕ ತಂಡದ ಪೈನಲ್ ನಲ್ಲಿ ಓಡಿಷಾ ರಾಜ್ಯ ತಂಡವನ್ನು ಸೋಲಿಸುವುದರ ಮೂಲಕ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾ ಕೂಟದಲ್ಲಿ ಪ್ರಥಮ ಸ್ಧಾನ ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಛತ್ತೀಸ್ ಘಡ್ ತಂಡ ಪಡೆದುಕೊಂಡಿದೆ. ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಆಟಗಾರರಿಗೆ ಕೂಡಿಗೆ ಕ್ರೀಡಾಶಾಲೆಯಲ್ಲಿರುವ ಹಾಕಿ ಟರ್ಫ್ ಮೈದಾನದಲ್ಲಿ ತರಬೇತಿಯನ್ನು ನೀಡಲಾಗಿತ್ತು. ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಹಾಗೂ ಬೆಂಗಳೂರಿನ ಕೇಂದ್ರ ಕಛೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸವಲ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಮುಕ್ಕಟೀರ ಜಯ ಅವರ ನೇತೃತ್ವದ ತಂಡಕ್ಕೆ ಕೂಡಿಗೆ ಕ್ರೀಡಾಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ತರಬೇತಿ ನೀಡಿದ್ದರು. ಕೊಡಗಿನ ದರ್ಶನ್ ಫೈನಲ್ ಪಂದ್ಯದಲ್ಲಿ ಎರಡು ಗೋಲುಗಳನ್ನು ಹೊಡೆದು ಗೆಲುವಿಗೆ ಕಾರಣರಾದರು. ಪೈನಲ್ ಹಾಕಿ ಪಂದ್ಯಾಟದಲ್ಲಿ 3-2 ಗೋಲು ಗಳ ಅಂತರದಲ್ಲಿ ಕರ್ನಾಟಕ ತಂಡ ಗೆಲುವು ಸಾಧಿಸಿದೆ. ತಂಡದ ನಾಯಕ ಕೊಡಗಿನ ಡಿ.ಎಸ್. ದರ್ಶನ್, ಸಂಜಿತ್ ಸೋಮಯ್ಯ, ಧಾರವಾಡದ ಮಿಥನ್ ಶ್ರೀನಿವಾಸ್, ಸೈಯದ್ ಬಾಷಾ, ನವೀನ್, ಎನ್.ಜಯವಂತ್, ರಘು, ವಿನೋದ್ ಕುಮಾರ್, ಮೈಸೂರಿನ ಹೆಚ್.ಬಿ. ಅನಿತ್ ರಾಜ್, ಹಾಸನದ ಹರೀಶ್ ಕುಮಾರ್, ಶಶಿಕಾಂತ್ ಚಿಕ್ಕಮಗಳೂರಿನ ಎಲ್.ಜಿ. ಚೇತನ್, ಕೆನರಾದ ನರೇಂದ್ರನಾಥ್ ಕದಂ ಕೋಲಾರದ ಆರ್.ವೇಣು (ಗೋಲ್ ಕೀಪರ್) ಪಂದ್ಯದಲ್ಲಿ ಭಾಗವಹಿಸಿದ್ದರು.
Back to top button
error: Content is protected !!