ವಿಶೇಷ
14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-2023: ಕೌಡಿಕಳಿ ಆಯ್ಕೆ
ಕೊಡಗು ಜಿಲ್ಲೆಯ ಉದಯೋನ್ಮುಖ ಚಲನಚಿತ್ರ ನಟಿ ಹಾಗೂ ನಿರ್ದೇಶಕಿ ಸಿಂಚನ ಪೊನ್ನವ್ವ ನಿರ್ದೇಶನದ ಕೊಡವ ಭಾಷೆಯ ಚಲನಚಿತ್ರ
ಕುಶಾಲನಗರ, ಮಾ 15: ಕೊಡಗು ಜಿಲ್ಲೆಯ ಉದಯೋನ್ಮುಖ ಚಲನಚಿತ್ರ ನಟಿ ಹಾಗೂ ನಿರ್ದೇಶಕಿ ಸಿಂಚನ ಪೊನ್ನವ್ವ ನಿರ್ದೇಶನದ ಕೊಡವ ಭಾಷೆಯ ಚಲನಚಿತ್ರ *ಕೌಡಿಕಳಿ*ಚಿತ್ರ ಕರ್ನಾಟಕ ರಾಜ್ಯದ ಪ್ರತಿಷ್ಠಿತ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-2023 ಕ್ಕೆ ಆಯ್ಕೆಯಾಗಿದೆ.
ಇಂಡಿಯನ್ ವಿಭಾಗದಲ್ಲಿ ದೇಶದ ಹಲವು ಭಾಷೆಗಳ ನಡುವೆ ಇದೇ ಪ್ರಥಮ ಬಾರಿಗೆ ಕೊಡವ ಭಾಷೆಯ ಚಲನಚಿತ್ರವೊಂದು ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇಂಡಿಯನ್ ವಿಭಾಗದಲ್ಲಿ ಒಟ್ಟು 14 ಚಿತ್ರಗಳು ಆಯ್ಕೆಯಾಗಿದ್ದು ಐದು ಕನ್ನಡ ಚಲನಚಿತ್ರಗಳು ಆಯ್ಕೆಗೊಂಡಿವೆ.
ಓಂ ಸ್ಟುಡಿಯೋ ಮತ್ತು ಪಿಂಗಾರ ಕ್ರಿಯೇಷನ್ಸ್ ಲಾಂಛನದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಆರ್ ಪ್ರೀತಮ್ ಶೆಟ್ಟಿ ಅವರ ಕಥೆ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಅವಿನಾಶ್ ಶೆಟ್ಟಿ ಹಾಗೂ ಪತ್ರಕರ್ತೆ ವನಿತಾ ಚಂದ್ರಮೋಹನ್ ನಿರ್ಮಿಸಿರುವ ಕೊಡವ ಭಾಷೆಯ ಚಲನಚಿತ್ರ “ಕೌಡಿ ಕಳಿ” ಕೊಡಗು ಮೈಸೂರು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಚಿತ್ರಿಕರಣಗೊಂಡಿತ್ತು.