ಕುಶಾಲನಗರ, ಮಾ 09: ತೊರೆನೂರು ಗ್ರಾಮದ ರೈತ ಬಾಂಧವರು ಮತ್ತು ಗ್ರಾಮಸ್ಥರು ಸಂಯುಕ್ತ ಆಶ್ರಯದಲ್ಲಿ ಹಾಲು ಹಲ್ಲಿನ ರಾಸುಗಳ ಗಾಡಿ ಓಟದ ಸ್ಪರ್ಧೆ ತೊರೆನೂರು ಗ್ರಾಮದ ಕಾವೇರಿ ನದಿ ದಡದ ಖಾಸಗಿ ಜಮೀನಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚು ಒತ್ತು ನೀಡುವ ಮೂಲಕ ಗ್ರಾಮೀಣ ಕಲೆ ಮತ್ತು ಸೊಗಡನ್ನು ಉಳಿಸಿ ಬೆಳೆಸುವ ಕರ್ತವ್ಯ ಮುಖ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಮಹೇಶ್, ಸದಸ್ಯರಾದ ಶಿವಕುಮಾರ್, ದೇವರಾಜ್, ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ, ಗ್ರಾಮದ ಪ್ರಮುಖರಾದ ಜಗದೀಶ್ ,ಪ್ರಕಾಶ್ , ಮಹಾದೇವಪ್ಪ, ತ್ಯಾಗರಾಜ, ದೊಡ್ಡಮ್ಮತಾಯಿ ಮತ್ತು ಚಿಕ್ಕಮ್ಮತಾಯಿ ದೇವಾಲಯ ಸಮಿತಿಯ ಅಧ್ಯಕ್ಷ ದುರುವಾಸ್, ಸೇರಿದಂತೆ ಸಮಿತಿಯ ಸದಸ್ಯರು ಯುವಕ ಸಂಘದ ಸದಸ್ಯರು ಗ್ರಾಮದ ರೈತ ಮುಖಂಡರು ಹಾಜರಿದ್ದರು.
ಹಾಲು ಹಲ್ಲಿನ ಎತ್ತಿನ ಗಾಡಿಯ ಓಟದ ಸ್ಪರ್ಧೆಯಲ್ಲಿ ವಿವಿಧೆಡೆಯ 34 ಜೋಡಿ ಎತ್ತಿನ ತಂಡಗಳು ಭಾಗವಹಿಸಿದ್ದವು.
ಹಾಸನ ಜಿಲ್ಲೆಯ ನಂದಿಪುರ ಗ್ರಾಮದ ಎತ್ತುಗಳ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ತೊರೆನೂರು ತಂಡ ದ್ವಿತೀಯ, ತೃತೀಯ ಸ್ಥಾನವನ್ನು ಮೈಸೂರು ಜಿಲ್ಲೆಯ ಚೆಪ್ಪರದಳ್ಳಿ ತಂಡ, 4 ನೇ ಸ್ಥಾನವನ್ನು ರಾಮನಾಥಪುರ ಎತ್ತಿನ ಗಾಡಿಯ ತಂಡ ಪಡೆದುಕೊಂಡಿತು.
ವಿಜೇತ ಎತ್ತಿನ ಗಾಡಿಯ ತಂಡದವರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ಸಂಘದ ಅಧ್ಯಕ್ಷ ದುರುವಾಸ್ ವಿತರಣೆ ಮಾಡಿದರು.
Back to top button
error: Content is protected !!