ಕಾರ್ಯಕ್ರಮ
ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಛಾಯಾ ಸಮ್ಮಿಲನ-2023
ಕುಶಾಲನಗರ, ಮಾ 09:ಛಾಯಾಗ್ರಾಹಕರು ಅದ್ಬುತ ಕಲಾವಿದರು ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಛಾಯಾಗ್ರಾಹಕರನ್ನು ಶ್ಲಾಘಿಸಿದರು. ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕ್ಯಾನನ್ ಕಂಪೆನಿಯ ಸಹಯೋಗದೊಂದಿಗೆ ಬುಧವಾರ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ಛಾಯಾ ಸಮ್ಮಿಲನ 2023 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದೊಂದಿಗೆ ಸೆಣಸ ಬೇಕಾದ ಅನಿವಾರ್ಯತೆ ಇದೆ. ವೃತ್ತಿಯಲ್ಲಿ ಯಶಸ್ಸು ಕಾಣಬೇಕಾದರೆ ವ್ಯಾಪಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಪತ್ರಕರ್ತರು ಮತ್ತು ಛಾಯಾಗ್ರಾಹಕರು ಎಂದರೆ ಒಂದೇ ನಾಣ್ಯದ 2 ಮುಖಗಳು. ಅದರಿಂದ ಈ ಎರಡು ಸಂಘಟನೆಗಳಿಗೆ ಒಂದೇ ನಿವೇಶನ ನೀಡಿ ಮೇಲೆ ಒಬ್ಬರಿಗೆ ಮತ್ತು ಕೆಳಗೆ ಒಬ್ಬರಿಗೆ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎನ್ನುವ ಭರವಸೆ ನೀಡಿದರು. ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಆರ್.ವಸಂತ ಮಾತನಾಡಿ, ಜಿಲ್ಲೆಯ ಛಾಯಾಗ್ರಾಹಕರ ಆರ್ಥಿಕ ಸಂಕಷ್ಟಕ್ಕೆ ಸರ್ಕಾರ ವಿಶೇಷ ಸೌಲಭ್ಯ ಘೋಷಣೆ ಮಾಡಬೇಕು. ನಮಗಾಗಿ ಛಾಯಾಗ್ರಾಹಕರ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಸರ್ಕಾರವನ್ನು ಕೇಳಿಕೊಂಡರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಫೋಟೋ ಕಲರ್ ಲ್ಯಾಬ್ ಅವರ ಸ್ಟಾಲ್ ಗಳು, ಆಲ್ಬಮ್ ಪ್ರಿಟಿಂಗ್ ನ ವಿವಿಧ ಮಾದರಿಗಳನ್ನು ಪ್ರದರ್ಶನ ಮಾಡಲಾಯಿತ್ತು. ಕೆನಾನ್ ಕಂಪೆನಿಯ ಅತ್ಯಾಧುನಿಕ ಕ್ಯಾಮರ್ ಗಳನ್ನು ಪ್ರದರ್ಶಿಸಿ ವಿಶೇಷ ರಿಯಾಯಿತಿ ದರದಲ್ಲಿ ವ್ಯಾಪಾರ ಮಾಡಿದರು. ಕುಶಾಲನಗರ ತಾಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್, ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಸೊಲೊಮನ್ ಡೇವಿಡ್, ಸಹ ಕಾರ್ಯದರ್ಶಿ ರಂಜಿತ್, ಐಪಿಪಿ ಸುರೇಶ್ ಮಾವಟ್ಕರ್, ಖಜಾಂಚಿ ಪ್ರಕಾಶ್, ಮುನೀರ್ ಅಹಮ್ಮದ್, ರೋಷನ್, ಮಾಜಿ ಅಧ್ಯಕ್ಷ ಗುಡ್ಡೆಮನೆ ವಿಶ್ವ ಕುಮಾರ್, ಮಾಳೇಟಿರ ಲಕ್ಷ್ಮಣ್, ಡಾಡು ಜೋಸೆಫ್ ಇತರರು ಉಪಸ್ಥಿತರಿದ್ದರು.