ಕುಶಾಲನಗರ ಫೆ 09: ಕೇಂದ್ರ ಕ್ರೀಡಾ ಪ್ರಾಧಿಕಾರದ ವತಿಯಿಂದ ಫೆ.3 ರಂದು ಮಧ್ಯಪ್ರದೇಶದ ಭೋಪಾಲ್ ನ ತಾತ್ಯಾಟೋಪಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ 5ನೇ ಖೇಲೊ ಇಂಡಿಯಾ ಯೂತ್ ಗೇಮ್ಸ್ ನ 18 ವರ್ಷ ವಯೋಮಿತಿಯ ಒಳಗಿನ ಅಥ್ಲೆಟಿಕ್ ವಿಭಾಗದ ಟ್ರಿಪಲ್ ಜಂಪ್ ( Triple Jump) ನಲ್ಲಿ ರಾಜ್ಯದಿಂದ ಪ್ರತಿನಿಧಿಸಿದ್ದ ಕೂಡಿಗೆಯ ಭೂಮೀಕ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಭೂಮಿಕ 12.02 ಮೀಟರ್ ಅಂತರ ಜಿಗಿದು ಬೆಳ್ಳಿ ಪದಕಕ್ಕೆ ಬಾಜನರಾಗಿದ್ದಾರೆ. ಮೂಲತಃ ಶಿವಮೊಗ್ಗ ಸಮೀಪ ಗ್ರಾಮಾಂತರ ಭಾಗದ ನಾಗರಾಜ್, ಜಯಮ್ಮ ದಂಪತಿ ಪುತ್ರಿ ಭೂಮಿಕ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾವಿಭಾಗ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಈಕೆಗೆ ಕೂಡಿಗೆ ಕ್ರೀಡಾ ಶಾಲೆಯ ಅಥ್ಲೆಟಿಕ್ ತರಬೇತುದಾರ ಬಿ. ಜಿ.ಮಂಜುನಾಥ್ ತರಬೇತಿ ನೀಡಿದ್ದಾರೆ. ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ. ಕೆ. ನಾಗರಾಜಶೆಟ್ಟಿ, ಪ್ರಾಂಶುಪಾಲ ಡಾ. ಬಸಪ್ಪ ಸೇರಿದಂತೆ ಉಪನ್ಯಾಸಕ ವೃಂದ ಅಭಿನಂದಿಸಿದೆ.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಅಗುವ ಬಯಕೆ…ಪದವಿಪೂರ್ವ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿನಿ ಭೂಮಿಕ ಈಗಾಗಲೇ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದು ರಾಷ್ಟ್ರೀಯ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ಸತತವಾಗಿ ತರಬೇತಿಯ ಮೂಲಕ ಪ್ರಯತ್ನ ಪಡುವುದಾಗಿ ತಿಳಿಸಿದ್ದಾರೆ.
Back to top button
error: Content is protected !!