ಕುಶಾಲನಗರ, ಫೆ 09: ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಆರ್.ಬಾಬು ರವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಕಛೇರಿ ಉದ್ಘಾಟಿಸಲಾಯಿತು. ಈ ಕುರಿತು ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ನಿರಂಜನ್, ಶ್ರೀ ಯೋಗಿ ನಾರೇಯಣ ಬಲಿಜ ಸಂಘವು 2014ರಲ್ಲಿ ಸ್ಥಾಪನೆಯಾಗಿ ಇಂದಿಗೆ 9 ವರ್ಷಗಳು ಕಳೆದಿವೆ. ಸಂಘದ ವತಿಯಿಂದ ಸಂಘದ ಕಾರ್ಯ ಚಟುವಟಿಕೆಗಾಗಿ ಸ್ಥಳದ ಕೊರತೆಯಿದ್ದು ಜಾಗ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತಾವನೆಯೂ ಪ್ರಗತಿಯ ಹಂತದಲ್ಲಿದೆ. ಮುಂದಿನ ಮಾರ್ಚ್ 7 ನೇ ತಾರೀಖಿನಲ್ಲಿ ತಾತಯ್ಯನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಂಘದ ವತಿಯಿಂದ ತೀರ್ಮಾನಿಸಲಾಗಿದ್ದು ಆ ಬಗ್ಗೆ ಇಂದು ಸಭೆ ಸೇರಿ ಚರ್ಚಿಸಲಾಗುವುದು. ಹಾಗೂ ಚಿಂತಾಮಣಿಯ ಐತಿಹಾಸಿಕ ಪ್ರಸಿದ್ಧ ಶ್ರೀ ಕೈವಾರ ಕ್ಷೇತ್ರಕ್ಕೆ ಸಂಘದ ವತಿಯಿಂದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಸಂಘದ ವತಿಯಿಂದ ಮುಂದೆ ಅಭಿವೃದ್ಧಿಯ ಕಡೆ ಚಿಂತನೆ ನಡೆಸಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.
ಸಂಘದ ಉಪಾಧ್ಯಕ್ಷ ಎಂ.ಆರ್. ಗಣೇಶ್ ಮಾತನಾಡಿ, ಕುಶಾಲನಗರ ಕಚೇರಿಯನ್ನು ಉದ್ಘಾಟಿಸಲಾಗಿದ್ದು ನಂತರ ಸರ್ಕಾರದ ಸಹಕಾರ ಪಡೆದು ಸಂಘದ ಸಮುದಾಯ ಭವನ ಹಾಗೂ ತಾತಯ್ಯನವರ ಮಂದಿರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸಂಘದ ವತಿಯಿಂದ ಹಲವು ಸಮಾಜಮುಖಿ ಕೆಲಸ ಕಾರ್ಯಗಳನ್ನು ನೆರವೇರಿಸಲು ಮತ್ತು ಸಂಘದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲು ಸುದಿನವಾದ ಇಂದು ಕಚೇರಿಯನ್ನು ಉದ್ಘಾಟಿಸಿ ನಂತರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಸಹ ಕಾರ್ಯದರ್ಶಿ ಟಿ.ಎನ್. ಜಯರಾಮ್, ಖಜಾಂಚಿ ಟಿ.ಪಿ. ಸತೀಶ್, ನಿರ್ದೇಶಕ ಸವಿತಾ ದಯಾನಂದ್, ಟಿ.ಆರ್. ತುಳಸಿ ಕಿರಣ್, ಶ್ರೀನಿವಾಸ್, ಸಿ.ಕೆ. ಕಾಂತರಾಜ್, ಎನ್ ಸ್ವಾಮಿ, ಸಿ. ಎನ್. ಮಹೇಶ್ ಮತ್ತಿತರರು ಹಾಜರಿದ್ದರು.
Back to top button
error: Content is protected !!