ಜನಮನ ರಂಜಿಸಿದ ರಾಜ್ಯಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ

ಕುಶಾಲನಗರ, ನ 26:
ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾಜ್ಯಮಟ್ಟದ ಎತ್ತಿನ ಗಾಡಿ ಓಟ ಹಾಗೂ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆ ನಡೆಯಿತು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ
ಈ ಗಾಡಿ ಓಟದ ಸ್ಪರ್ಧೆಯನ್ನು ಉದ್ಯಮಿ ಮೋಹನ್ ಲಾಲ್ ಚೌದರಿ ಉದ್ಘಾಟಿಸಿದರು.
ಸ್ಪರ್ಧೆಯಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ಜನರು ಸೇರಿದಂತೆ ಮೈಸೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಗಡಿ ಭಾಗದ ಜನತೆ ಭಾಗವಹಿಸಿದ್ದು ವಿಶೇಷವೆನಿಸಿತ್ತು.
ಗ್ರಾಮದ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಸ್ಪರ್ಧೆ ಯಲ್ಲಿ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆ ಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು.
ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಎತ್ತಿನ ಗಾಡಿ ಮಾಲೀಕರಿಗೆ ಕ್ರಮವಾಗಿ 8 ಗ್ರಾಂ ಚಿನ್ನ ಹಾಗೂ 6 ಗ್ರಾಂ.ಚಿನ್ನ, ತೃತೀಯ ಬಹುಮಾನ 4 ಗ್ರಾಂ.ಚಿನ್ನವನ್ನು ಬಹುಮಾನ ರೂಪದಲ್ಲಿ ವಿಜೇತರಿಗೆ ವಿತರಿಸಲಾಯಿತು.
ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 24 ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲೀಕರು ಪಾಲ್ಗೊಂಡಿದ್ದರು.
ರೋಮಾಂಚನಕಾರಿ ಹಾಗೂ ಸಾಹಸಮಯ ಕ್ರೀಡೆಯಾದ ಎತ್ತಿನ ಗಾಡಿ ಸ್ಪರ್ಧೆ ವಿಕ್ಷೀಸಿಸಲು ಸಾವಿರಾರೂ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಗ್ರಾಮೀಣ ಕ್ರೀಡಕೂಟಗಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಚಾಲನೆ ನೀಡಿದರು.
ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಕರುಂಬಯ್ಯ,ಬೊಜೇಗೌಡ,ಎಚ್.ಡಿ.ಲೋಹಿತ್ ಕುಮಾರ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಎಸ್.ಮಧುಸೂದನ್,ಗೌರವ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್, ಉಪಾಧ್ಯಕ್ಷ ಎಚ್.ಆರ್.ರವಿ,ಕಾರ್ಯದರ್ಶಿ ಎಚ್.ಎಂ.ತಿಮ್ಮಪ್ಪ, ಖಜಾಂಚಿ ಎಚ್.ಎಸ್.ರಘು,ಸಂಘಟನಾ ಕಾರ್ಯದರ್ಶಿ ತನುಕುಮಾರ್,ನಿರ್ದೇಶಕರಾದ ಶಮಂತ್,ಗಣೇಶ್, ಆದರ್ಶ,ಶ್ಯಾಮು,ಜಗದೀಶ್ ಪಟೇಲ್, ತ್ರಿನೇಶ್,ಮಣಿಕಂಠ,ದಿಲೀಪ್, ಸಲಹೆಗಾರರಾದ ಎಚ್.ಎಸ್.ಮಂಜುನಾಥ್, ಆರ್.ಆರ್.ಕುಮಾರ್, ನಿವೃತ್ತ ಸೈನಿಕ ಪುಟ್ಟೇಗೌಡ,ಚಂದ್ರಶೇಖರ್, ಎಚ್.ಈ.ಜಗದೀಶ್, ಪ್ರದೀಪ್ ಇದ್ದರು.