ಕ್ರೈಂ

ಕೈಹತ್ತದ ಕೃಷಿ: ಹತಾಷೆಯಿಂದ ಯುವರೈತ ಆತ್ಮಹತ್ಯೆಗೆ ಶರಣು.

ಕುಶಾಲನಗರ.ಸೆ.06: ಕೃಷಿ ಚಟುವಟಿಕೆಗಾಗಿ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ಯುವ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಬ್ಬನ ಕುಪ್ಪೆಯಲ್ಲಿ ನಡೆದಿದೆ.
ಗ್ರಾಮದ ರೈತ ಅನಿಲ್(30) ಸಾವನ್ನಪ್ಪಿದವರು. ಇವರಿಗೆ ಪತ್ನಿ, ಒಂದು ಹೆಣ್ಣು ಮಗುವಿದೆ.
ಘಟನೆ ವಿವರ; ರೈತ ಅನಿಲ್ ತಂಬಾಕು ಬೆಳೆಗಾರರಾಗಿದ್ದು ಕೃಷಿಪತ್ತಿನ ಸಹಕಾರ ಸಂಘದಲ್ಲಿ 5 ಲಕ್ಷ. ಕರ್ನಾಟಕ ಬ್ಯಾಂಕಿನಲ್ಲಿ 2 ಲಕ್ಷ ಒಡವೆ ಅಡಮಾನ ಸಾಲ ಮಾಡಿದ್ದರು.
ಎರಡು ವರ್ಷಗಳಿಂದ ಕೊರೋನ, ಈ ಸಾಲಿನಲ್ಲಿ ಅತಿಯಾದ ಮಳೆಯಿಂದ ತಂಬಾಕು ಬೆಳೆ ಕೈಹತ್ತಿರಲಿಲ್ಲ. ಸಾಲ ತೀರಿಸುವ ಪರಿ ಎಂತು ಎಂಬ ಚಿಂತೆಯಲ್ಲಿದ್ದ. ಅನಿಲ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರಿಮಿನಾಶಕ ಕಾಳು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಇವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!