ಕುಶಾಲನಗರ, ಫೆ. 16: ಗುತ್ತಿಗೆದಾರ ಪರವಾನಿಗೆ ನೀಡಲು ಲೋಕೋಪಯೋಗಿ ಇಲಾಖೆ ಕಚೇರಿಯ ನೌಕರನೊಬ್ಬ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಡಿ ಗ್ರೂಪ್ ನೌಕರ ಶರತ್
ಮಡಿಕೇರಿಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಡಿ ಗ್ರೂಪ್ ನೌಕರ ಶರತ್ ಎಂಬಾತ ಕುಶಾಲನಗರ ಸಮೀಪ ವೀರಭೂಮಿ ಬಳಿ ತನ್ನ ಮನೆಯಲ್ಲಿ ಗುತ್ತಿಗೆದಾರ ಲೈಸೆನ್ಸ್ ನೀಡಲು ರಾಘವೇಂದ್ರ ಎಂಬವರಿಂದ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭ ಸಿಕ್ಕಿಬಿದ್ದಿದ್ದಾನೆ. ಗುತ್ತಿಗೆದಾರ ಲೈಸೆನ್ಸ್ ನೀಡಲು ತನಗೆ 10 ಸಾವಿರ ಮತ್ತು ತನ್ನ ಕಚೇರಿಯಲ್ಲಿ ರೂ. 4 ಸಾವಿರ ಸೇರಿದಂತೆ ಒಟ್ಟು 14 ಸಾವಿರ ರೂಗಳಿಗೆ ಬೇಡಿಕೆ ಇಟ್ಟಿದ್ದ ಶರತ್ 10 ಸಾವಿರ ರೂಗಳನ್ನು ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ. ಲೋಕಾಯುಕ್ತ ಎಸ್ಪಿ ಉದೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ವೀಣಾ ನಾಯಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.