ಕುಶಾಲನಗರ, ಸೆ 05: : ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರಪೇಟೆ ತಾಲ್ಲೂಕು ವತಿಯಿಂದ 2022-23ನೇ ಸಾಲಿನ ಕೊಡ್ಲಿಪೇಟೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ(ಅನುದಾನಿತ) ಪ್ರೌಢಶಾಲೆಯು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಬಾಲಕರ ತಂಡ ವಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್,ಹ್ಯಾಂಡ್ ಬಾಲ್ ಹಾಗೂ ಫುಟ್ಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮೂರು ಸಾವಿರ , ಹಾಗೂ ಸಾವಿರದ ಐನೂರು ಮೀಟರ್ ಓಟ ಸ್ಪರ್ಧೆದಲ್ಲಿ ಬಸವರಾಜು ಪ್ರಥಮ ಸ್ಥಾನ,ಪ್ರೇಮ್ ಕುಮಾರ್ ದ್ವಿತೀಯ ಸ್ಥಾನಗಳಿಸಿದ್ದಾರೆ.ನೂರು ಹಾಗೂ ಎರಡು ನೂರು ಮೀಟರ್ ಓಟ ಸ್ಪರ್ಧೆ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಮೊಹಮ್ಮದ್ ಸಮಾಲ್ ಪ್ರಥಮ ಸ್ಥಾನಗಳಿಸಿದ್ದಾನೆ.ಎಂಟು ನೂರು ಮೀಟರ್ ಓಟದಲ್ಲಿ ಡಿ.ಎಸ್.ರೋಹಿತ್ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ, ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳಿಸಿದ್ದಾನೆ.ನಾಲ್ಕು ನೂರು ಮೀಟರ್ ಓಟದಲ್ಲಿ ಬಿ.ಎಲ್.ರಂಜಿತ್ ದ್ವಿತೀಯ ಸ್ಥಾನಗಳಿಸಿದ್ದಾನೆ. ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಎನ್.ಕೆ.ಆದಿತ್ಯ ಪ್ರಥಮ ಸ್ಥಾನಗಳಿಸಿದ್ದಾನೆ.ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬಿ.ಎಂ.ಬಸವರಾಜು ದ್ವಿತೀಯ ಹಾಗೂ ವಿದ್ಯಾರ್ಥಿ ತಪ್ಸಿರ್ ತೃತೀಯ ಸ್ಥಾನಗಳಿಸಿದ್ದಾನೆ.ನಡಿಗೆ ಸ್ಪರ್ಧೆ ಸಂಜಯ್ ದ್ವಿತೀಯ ಸ್ಥಾನಗಳಿಸಿದ್ದಾರೆ. ರಿಲೆ ಓಟ ಸ್ಪರ್ಧೆಯಲ್ಲಿ ಮೊಹಮ್ಮದ್ ಸಮಾಲ್ ತಂಡ ಪ್ರಥಮ ಸ್ಥಾನಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಎರಡು ನೂರು ಮೀಟರ್ ಓಟ,ಎತ್ತರ ಜಿಗಿತ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ನೀಶಾ ಫಾತಿಮಾ ಪ್ರಥಮ ಸ್ಥಾನಗಳಿಸಿದ್ದಾಳೆ.ಮೂರು ಸಾವಿರ ಹಾಗೂ ಸಾವಿರದ ಐದುನೂರು ಮೀಟರ್ ಓಟ ಸ್ಪರ್ಧೆಯಲ್ಲಿ ಇಂಚರಾ ಹಾಗೂ ಮನಸಾ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ್ದಾರೆ.ಎಂಟು ನೂರು ಮೀಟರ್ ಓಟ ಸ್ಪರ್ಧೆಯಲ್ಲಿ
ಕೆ.ಆರ್.ಮೋನಿಕಾ ಪ್ರಥಮ ಹಾಗೂ ಸ್ಪೂರ್ತಿ ದ್ವಿತೀಯ ಸ್ಥಾನಗಳಿಸಿದ್ದಾರೆ.ನಾಲ್ಕು ನೂರು ಮೀಟರ್ ಓಟ ಸ್ಪರ್ಧೆಯಲ್ಲಿ ನಿರ್ಮಾಲ ದ್ವಿತೀಯ ಸ್ಥಾನಗಳಿಸಿದ್ದಾಳೆ.ರಿಲೆ ನೀಶಾ ಫಾತಿಮಾ ತಂಡ ಪ್ರಥಮ ಸ್ಥಾನಗಳಿಸಿದ್ದಾರೆ.ನಡಿಗೆ ಸ್ಪರ್ಧೆ ಇಂಚರಾ ಪ್ರಥಮ ಸ್ಥಾನಗಳಿಸಿದ್ದಾರೆ.ಗುಂಡು ಎಸೆತ ಅಪ್ಸನಾ ದ್ವಿತೀಯ ಹಾಗೂ ತಟ್ಟೆ ಎಸೆತ ಅಮೃತಾ ದ್ವಿತೀಯ ಸ್ಥಾನಗಳಿಸಿದ್ದಾರೆ.ತ್ರಿವಿಧ ಜಿಗಿತ ಮಾನ್ಯತಾ ಪ್ರಥಮ ಹಾಗೂ ಕೆ.ಆರ್.ಮೋನಿಕಾ ದ್ವಿತೀಯ ಸ್ಥಾನಗಳಿಸಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕ ಎ.ಪಿ.ಸುನೀಲ್ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನ ನೀಡಿ ಕ್ರೀಡಾಪಟುಗಳ ಸಾಧನೆಗೆ ಕಾರಣರಾಗಿದ್ದಾರೆ. ಈ ಸಾಧನೆಗಾಗಿ ಕ್ರೀಡಾಪಟುಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಪಿ. ಸುನೀಲ್ ಹಾಗೂ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕಿಯರ ವರ್ಗವನ್ನು ಹಾಗೂ ಕ್ರೀಡಾಪಟುಗಳನ್ನು ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಚಂದ್ರಮೌಳಿ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯ ಶಿಕ್ಷಕ ಅಬ್ದುಲ್ ರಬ್ ಅಭಿನಂದಿಸಿದ್ದಾರೆ.ಈ ಸಂದರ್ಭ ಶಿಕ್ಷಕರಾದ ಚಂದ್ರಶೇಖರ್ ಅಡ್ಮಿನಿ,ಎಂ.ಪಿ.ಶಿವಕುಮಾರಿ, ಬಿ.ವಿ.ಸುಮಾ,ಕಿರಣ್ ಕುಮಾರ್,ಯು.ಡಿ.ಮಂಜುನಾಥ್,ನಂದೀತಾ, ಸಿಬ್ಬಂದಿಗಳಾದ ಪವನ್ ಕುಮಾರ್ ಹಾಗೂ ಮಂಜೇಗೌಡ ಇದ್ದರು.
Back to top button
error: Content is protected !!