ಕ್ರೀಡೆ

ಶಿರಂಗಾಲ ಪ್ರೌಢಶಾಲೆಗೆ ಸತತ ಏಳನೇ ಬಾರಿ ಸಮಗ್ರ ಪ್ರಶಸ್ತಿ.

ಕುಶಾಲನಗರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ

ಕುಶಾಲನಗರ, ಆ 27: ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರಪೇಟೆ ತಾಲ್ಲೂಕು ವತಿಯಿಂದ 2022-23ನೇ ಸಾಲಿನ ಕುಶಾಲನಗರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲ ಪ್ರೌಢಶಾಲೆಯು ಸತತ 7 ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮೇಲಾಟಗಳಲ್ಲಿ ಬಾಲಕೀಯರ ರಿಲೆ ಪ್ರಥಮ , ನೂರು ಮೀ ಓಟದಲ್ಲಿ ಅಂಕಿತ ಪ್ರಥಮ ಸ್ಥಾನ, 1500 ಮೀ ಓಟದಲ್ಲಿ ಪ್ರಥಮ ಹಾಗೂ 100 ಮೀ ಓಟ ಹೊನ್ನಮ್ಮ ತೃತೀಯ ಸ್ಥಾನಗಳಿಸಿದ್ದಾರೆ. 1500 ಮೀ ಓಟದಲ್ಲಿ ಪ್ರಕೃತಿ ದ್ವಿತೀಯ ಹಾಗೂ 200 ಮೀ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾಳೆ. ಉದ್ದ ಜಿಗಿತದಲ್ಲಿ ಎಸ್.ಆರ್.ಅಶ್ವಿನಿ ತೃತೀಯ ಹಾಗೂ ತ್ರಿವಿಧ ಜಿಗಿತದಲ್ಲೂ ದ್ವಿತೀಯ ಸ್ಥಾನಗಳಿಸಿದ್ದಾಳೆ. 3000 ಮೀ ಓಟದಲ್ಲಿ ಕೌಶಲ್ಯ ಪ್ರಥಮ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ
ಬಹುಮಾನಗಳಿಸಿದರು. ಎತ್ತರ ಜಿಗಿತದಲ್ಲಿ ಸ್ಫೂರ್ತಿ ದ್ವಿತೀಯ ಬಹುಮಾನ ಪಡೆದರು.ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ನಂದಿನಿ ಪ್ರಥಮ ಸ್ಥಾನ ಪಡೆದರು.
ಬಾಲಕರ ವಿಭಾಗದಲ್ಲಿ ಆದಿತ್ಯ 3000 ಮೀ 800 ಮೀ ಓಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾನೆ. ಚಕ್ರ ಎಸೆತ ದರ್ಶನ್ ಪ್ರಥಮ ಸ್ಥಾನ, ತ್ರಿವಿಧ ಓಟದಲ್ಲಿ ರೋಹನ್ ದ್ವಿತೀಯ. 1500 ಮೀ ಓಟದಲ್ಲಿ ಪ್ರಥಮ ಹಾಗೂ ತ್ರಿವಿಧ ಜಿಗಿತದಲ್ಲಿ ದಿಗಂತ್ ಪ್ರಥಮ ಸ್ಥಾನಗಳಿಸಿದ್ದಾನೆ. 100 ಮೀ‌ ಓಟದಲ್ಲಿ ಯಶ್ವಂತ್ ದ್ವಿತೀಯ ಸ್ಥಾನಗಳಿಸಿದರು.
ಗುಂಪು ಆಟಗಳಲ್ಲಿ ಬಾಲಕಿಯರ ವಿಭಾಗದ ಹಾಕಿ ಪ್ರಥಮ , ಹ್ಯಾಂಡ್ ಬಾಲ್ ದ್ವಿತೀಯ , ಖೋ ಖೋ ದ್ವಿತೀಯ , ಕಬಡ್ಡಿ ದ್ವಿತೀಯ
ಬಾಲಕರ ವಿಭಾಗ ಖೋ ಖೋ ದ್ವಿತೀಯ , ಹ್ಯಾಂಡ್ ಬಾಲ್ ದ್ವಿತೀಯ , ಹಾಕಿ ದ್ವಿತೀಯ ಸ್ಥಾನ ವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಉಳಿಸಿ ಕೊಂಡಿದೆ .ಈ ಸಾಧನೆಗಾಗಿ ಕ್ರೀಡಾಪಟುಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಟಿ. ಸೌಮ್ಯ ಹಾಗೂ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ ಶಿಕ್ಷಕಿಯರ ವರ್ಗವನ್ನು ಮುಖ್ಯ ಶಿಕ್ಷಕ ಆರ್.ಡಿ. ಲೋಕೇಶ್ , ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕ್ರೀಡಾಕೂಟಗಳನ್ನು ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!