ಕುಶಾಲನಗರ, ಏ 07: ದಿನಾಂಕ: 06-04-2025 ರ ಭಾನುವಾರ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ” ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧೆಯಲ್ಲಿ” ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಕೂಡಿಗೆ ತಂಡ ಮೈ ರೋಮಾಂಚನಗೊಳಿಸುವ ನೃತ್ಯ ಪ್ರಕಾರವನ್ನು ನೀಡಿ ಪ್ರಥಮ ಬಹುಮಾನ ಹಾಗೂ ತೃತೀಯ ಬಹುಮಾನ ಪಡೆದುಕೊಂಡಿರುತ್ತಾರೆ. ನೃತ್ಯ ಸ್ಪರ್ಧೆಯಲ್ಲಿ ಸುಮಾರು 15 ಕ್ಕೂ ಅಧಿಕ ನೃತ್ಯ ಕಲಾ ತಂಡಗಳು ಬೆಂಗಳೂರು, ಹುಣಸೂರು, ಶನಿವಾರಸಂತೆ, ಸೋಮವಾರಪೇಟೆ ಕಡೆಗಳಿಂದ ಭಾಗವಹಿಸಿದ್ದವು. ಅದರಲ್ಲಿ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ತೀರ್ಪುಗಾರರ ಹಾಗೂ ನೆರೆದಿದ್ದ ಎಲ್ಲಾ ಜನರ ಮೆಚ್ಚುಗೆಗೆ ಪಾತ್ರರಾಗಿ ಇವರ ನೃತ್ಯವು ಎಲ್ಲರ ಗಮನ ಸೆಳೆಯಿತು. ಈ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀ ಮನೋಜ್ ರಿಯಾಲಿಟಿ ಶೋ ಹಾಗೂ ಚಲನಚಿತ್ರ ನೃತ್ಯ ಸಂಯೋಜಕರು, ಶ್ರೀ ಶಂಕರಯ್ಯ ಭರತನಾಟ್ಯ ಕಲಾವಿದರು ಹಾಗೂ ಶಿಕ್ಷಕರು ಮತ್ತು ಶ್ರೀ ದರ್ಶನ್ ರಿಯಾಲಿಟಿ ಶೋ ಸಹಾಯಕ ನೃತ್ಯ ಸಂಯೋಜಕರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಸದಸ್ಯರು ಶ್ರೀ ಡಾ. ಮಂತರ್ ಗೌಡ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ವಿ. ಪಿ ಶಶಿಧರ್, ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷರು ಶ್ರೀ ಸುರೇಶ್ ಹಾಗೂ ದೇವಾಲಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಆಗಮಿಸಿದ್ದರು ಮತ್ತು ವಿಜೇತರಾದ ತಂಡಕ್ಕೆ ಬಹುಮಾನ ವಿತರಿಸಿ ಅಭಿನಂದನೆಯನ್ನು ಸಲ್ಲಿಸಿದರು.
Back to top button
error: Content is protected !!