ಸುದ್ದಿಗೋಷ್ಠಿ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಪ್ರಕರಣ: ಉನ್ನತ ಮಟ್ಟದ ತನಿಖೆ ಅಗತ್ಯ: ರವಿ‌ಕುಶಾಲಪ್ಪ

ಕುಶಾಲನಗರ, ಏ 07 : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಪ್ರಕರಣದ ಸತ್ಯಾಸತ್ಯತೆ ತಿಳಿಯಬೇಕಾದರೆ ಸರಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸಬೇಕು ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ರವಿಕುಶಾಲಪ್ಪ ಆಗ್ರಹಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಇಂದೊಂದು ವಿಶೇಷ ಪ್ರಕರಣವಾಗಿದೆ. ಅಮಾಯಕ ಯುವಕ ವಿನಯ್ ಸೋಮಯ್ಯ ಅವರ ಸಾವು ತುಂಬ ನೋವು ತಂದಿದೆ.ಜೊತೆಗೆ ಅವರ ಕುಟುಂಬ ವರ್ಗಕ್ಕೂ ಅನ್ಯಾಯವಾಗಿದೆ. ವಿನಯ್ ಸೋಮಯ್ಯ ಅವರ ಮನೆಗೆ ಹೋಗಿ ಸಂತ್ವಾನ ಹೇಳಿದ್ದೇವೆ. ವಿನಯ್ ಗೆ ನಿರಂತರ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನಯ್ ಮೇಲೆ ಹಾಕಿದ ಕೇಸ್ ಗೆ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲಾಗಿದೆ. ಆದರೂ ಕೂಡ ಪೊಲೀಸರ‌ ನಿರಂತರ ಕಿರುಕುಳ ನೀಡಿದ್ದಾರೆ. ತಹಶೀಲ್ದಾರ್ ಕಚೇರಿಗೆ ಬಂದು ಸಹಿ ಮಾಡುವಂತೆ ಒತ್ತಡ ಹಾಕಿದ್ದಾರೆ.ಇದು ನ್ಯಾಯಾಲಯ ಉಲ್ಲಂಘನೆ ಹಾಗೂ ಅಪಮಾನ ಮಾಡಿದಂತೆ ಆಗಿದೆ ಎಂದರು. ವಿನಯ್ ಸಾವಿನ ಕಾರಣರಾದವರ ಮೇಲೆ ಕೇಸು ದಾಖಲಾಗಿ ಮೂರು ದಿನ ಕಳೆದರೂ ಅವರನ್ನು ಬಂಧಿಸಿಲ್ಲ. ಕೊಡಗಿನ ಎಸ್ಪಿ ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಿಜೆಪಿ
ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಹಿಂದುತ್ವದ ಮುಖಂಡರ ಮೇಲೆ ಮೊಕದ್ದಮೆ ಹೂಡುವ ಮೂಲಕ ಬೆದರಿಸುವ ಕೆಲಸ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರನ್ನು ಮುಟ್ಟಿದರೆ ಸುಮ್ಮನಿರುವುದಿಲ್ಲ.ಯಾವುದೇ ಕಾರ್ಯಕರ್ತರು ಭಯಪಡುವ ಅಗತ್ಯ ಇಲ್ಲ.ನಿಮ್ಮ ರಕ್ಷಣೆಗೆ ನಾವಿದ್ದೇವೆ.ನಮ್ಮ ವಕೀಲರು ಇದ್ದಾರೆ.ಕಾಂಗ್ರೆಸ್ ದಾದಾ ಗಿರಿಗೆ ಹೆದರಿ ಪಲಾಯನ ಮಾಡುವುದಿಲ್ಲ. ನಿರಂತರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪೊನ್ನಣ್ಣ ಅವರು ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ.ಸಮಾಜ ಒಡೆಯುವ ಕೆಲಸ ನಡೆಯೋದಿಲ್ಲ. ಜನರು ನಿಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿದ್ದಾರೆ.ಅಧಿಕಾರದಲ್ಲಿ ಇದ್ದಾಗ ಚೆನ್ನಾಗಿ ಮಾಡಿಕೊಂಡು ಹೋಗಬೇಕು.ಶಾಸಕರು ಅಭಿವೃದ್ಧಿ ಕಡೆ ಗಮನ‌ ಸರಿಸುವುದು ಒಳಿತು ಎಂದು ಎಚ್ಚರಿಕೆ ನೀಡಿದರು.

ಕಳೆದ ವರ್ಷ ಪೊನ್ನಣ ಅವರ ಪ್ರತಿಕೃತಿ ದಹನ‌ ಮಾಡಿದಾಗ ಇದೇ ಶಾಸಕರು ಇದು ಕೊಡಗಿನ ಸಂಸ್ಕೃತಿಯೇ ಎಂದು ಪ್ರಶ್ನೆ ಮಾಡಿದ್ದರು.ಜೊತೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರ ಮೇಲೆ ಕೇಸು ಹಾಕಿಸಿದ್ದರು.ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪ್ರತಿಕೃತಿ ದಹನ‌ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಏಕೆ ಕೇಸು ಹಾಕಿಲ್ಲ ಎಂದು ಪ್ರಶ್ನಿಸಿದ ರವಿಕುಶಾಲಪ್ಪ ಅವರು ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.
ಏ.9 ರಂದು ಕಾಂಗ್ರೆಸ್ ಸರ್ಕಾರದ
ದುರಾಡಳಿತದ ವಿರುದ್ಧ ಮಡಿಕೇರಿಯಲ್ಲಿ ಜನಾಕ್ರೋಶ ಸಮಾವೇಶ ಆಯೋಜಿಸಲಾಗಿದೆ.ಈ ಸಮಾವೇಶಕ್ಕೆ ರಾಜ್ಯ ಮುಖಂಡರು ಆಗಮಿಸಲಿದ್ದು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರವಿಕುಶಾಲಪ್ಪ ಮನವಿ ಮಾಡಿದರು.

ಬಿಜೆಪಿ ಮುಖಂಡ ಗಣಿಪ್ರಸಾದ್ ಮಾತನಾಡಿ,ವಿನಯ್ ಅವರ ಕುಟುಂಬಕ್ಕೆ ಅನ್ಯಾಯ ಆಗಿದೆ. ವಿನಯ್ ಸಾವಿಗೆ ಕಾರಣರಾದವರ‌ ಮೇಲೆ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಮುಖಂಡರು ವಿನಯ್ ಅವರ ಕುಟುಂಬಕ್ಕೆ ಸಾಂತ್ವನ ಕೂಡ ಹೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರಪೇಟೆ ಮಂಡಲ
ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ,ಮಡಿಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನೆಪದಲ್ಲಿ ವಿನಯ್ ಸಾವಿನ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹನ‌ ಪ್ರತಿಕೃತಿ ದಹನ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಮೋಟೊ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಡಿಕೇರಿ ನಗರ ಸಭೆ ಸದಸ್ಯ ಸತೀಶ್, ನಗರ ಬಿಜೆಪಿ ಘಟಕದ ಅಧ್ಯಕ್ಷ ಎಂ.ಎಂ. ಚರಣ್, ಬಿಜೆಪಿ ಯುವ‌ ಮೋರ್ಚಾ ಮುಖಂಡ ಚಂದ್ರಶೇಖರ್ ಹೇರೂರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us