ಕಾರ್ಯಕ್ರಮ

ದೇವರ ದಾಸಿಮಯ್ಯ ಜಯಂತಿ ಮತ್ತು ಶ್ರೀರಾಮನವಮಿ ಕಾರ್ಯಕ್ರಮ

ಕುಶಾಲನಗರ ಏ 6:ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ ಎಂದು ಕುಶಾಲನಗರ ದೇವಾಂಗ ಸಮಾಜದ ಅಧ್ಯಕ್ಷ ಡಿ.ವಿ.ರಾಜೇಶ್ ತಿಳಿಸಿದರು.

ಕುಶಾಲನಗರದ ರಥ ಬೀದಿಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ದೇವರ ದಾಸಿಮಯ್ಯ ಜಯಂತಿ ಮತ್ತು ಶ್ರೀರಾಮನವಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನೇಕಾರ ಸಂತ ತಮ್ಮ ಜೀವಿತಾವಧಿಯಲ್ಲಿ ಸಮಾಜದ ಸಕಲರ ಜೀವನದ ಉನ್ನತಿಗೆ ವಚನಗಳ ಮೂಲಕ ಧಾರೆ ಎರೆದ ಕ್ರಾಂತಿಕಾರಕ ಸಾಮಾಜಿಕ ಚಿಂತನೆಗಳಿಂದ ಸಂಸ್ಕ್ರತಿ, ಸಂಪ್ರದಾಯಗಳಿಗೆ ಹೊಸ ದಿಕ್ಕನ್ನು ತೋರಿಸಿ ಸಕಲರಿಗೂ ಸನ್ಮಾರ್ಗದಲ್ಲಿ ಸಾಗುವಂತೆ ಪ್ರತಿ ಜೀವನದ ಗುರಿಯನ್ನು ಸಾಧಿಸುವಂತೆ ತಮ್ಮ ಕ್ರಾಂತಿಕಾರಕ ವಚನಗಳ ಮೂಲಕ ಪ್ರೇರೇಪಿಸಿದ ಸಂತ ಕ್ರಾಂತಿಕಾರಿ ಸುಧಾರಣೆಯ ಕನ್ನಡ ವಚನಗಳ ಬ್ರಹ್ಮ ದೇವರ ದಾಸಿಮಯ್ಯ
ಸಾಮಾಜಿಕವಾಗಿ ಸಮಾಜಗಳ ಅಂಕು ಡೊಂಕುಗಳನ್ನು ಸಮಾಜದ ಸುಧಾರಣೆಗೆ ತಮ್ಮ ವಚನಗಳಲ್ಲಿ ಸರಳವಾಗಿ ಸಾಮಾನ್ಯ ಜನತೆಗೆ ತಿಳಿಸಿ ಅದನ್ನು ಪಾಲನೆ ಮಾಡುವ ಹಾಗೆ ಕ್ರಾಂತಿ ಮಾಡಿದ ವಚನಕಾರರು ಇವರ ವಚನಗಳಿಗೆ ಮಾರುಹೋಗಿ ಭಕ್ತಿ ಭಂಡಾರಿ ಬಸವಣ್ಣನವರು ಇವರ ಅನುಯಾಯಿಗಳಗಿ ಅವರ ಪ್ರೇರಣೆಯಿಂದ ಅವರಿಂದ ಪ್ರಭಾವಿತರಾಗಿ ಅವರ ಹಾದಿಯಲ್ಲಿ ವಚನಗಳಲ್ಲಿ ಮುಂದುವರೆದರು ,
ಶ್ರೀ ದೇವರ ದಾಸಿಮಯ್ಯನವರು ಕರ್ನಾಟಕ ರಾಜ್ಯದ ಪ್ರಸಿದ್ಧ ಆದ್ಯ ಕನ್ನಡ ವಚನಾಕರರ ಗುರುಗಳಲ್ಲಿ ಒಬ್ಬರು ಎಂದು ಶ್ಲಾಘಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ಎಂ.ಆರ್. ಪ್ರಸನ್ನಕುಮಾರ್ ಭಟ್ ನೇತೃತ್ವದಲ್ಲಿ ಬೆಳ್ಳಗಿನಿಂದ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಡಿ.ಜಿ.ಪ್ರದೀಪ್,
ಡಿ.ವಿ. ಚಂದ್ರಶೇಖರ್, ಡಿ.ಟಿ.ವಿಜೇಂದ್ರ, ಡಿ.ಸಿ.ಜಗದೀಶ್, ಡಿ.ಟಿ.ನಾಗೇಂದ್ರ, ಡಿ.ಬಿ.ವಿನೋದ್, ಡಿ.ಆರ್.ಹರೀಶ್, ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಮಹೇಶ್, ದಿವ್ಯ, ರೂಪ, ಶೋಭಾ, ಗೀತಾ, ಮಂಜುಳ ಗೋಪಾಲ್, ಸಂಘದ ಪ್ರಮುಖರಾದ ಡಿ.ಎಸ್.ಅಂಬರೀಶ್, ಡಿ.ಕೆ.ಮಹೇಶ್, ಡಿ.ಎಂ.ಆನಂದ್, ಡಿ.ಎಂ.ಪುನೀತ್ ಹಾಗೂ ಇನ್ನಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us