ಕುಶಾಲನಗರ, ಮಾ 30: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ (ರಿ) ಮತ್ತು ಸಂತ ಅಂತೋನಿಯವರ ದೇವಾಲಯ ಶುಂಠಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ 14ನೇ ವರ್ಷದ ಜಿಲ್ಲಾಮಟ್ಟದ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾವಳಿಯ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಸಂತ ಅಂತೋಣಿ ದೇವಾಲಯದ ಧರ್ಮ ಕೇಂದ್ರದ ಗುರುಗಳಾದ ವಂ. ಸ್ವಾಮಿ ವಿಜಯಕುಮಾರ್ ಹಾಗೂ ಜಿಲ್ಲಾ ಸಂಘದ ಅಧ್ಯಕ್ಷರಾದ ಜಾನ್ಸನ್ ಪಿಂಟೋ ಜಂಟಿಯಾಗಿ ಉದ್ಘಾಟಿಸಿದರು. ತದನಂತರ ಕ್ರಿಕೆಟ್ ಪಂದ್ಯಾಟದ ಪೂರ್ವಭಾವಿ ಸಭೆಯನ್ನು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಹಲವಾರು ವಿಷಯಗಳು ಚರ್ಚೆಗೆ ಚರ್ಚೆಗೆ ಒಳಪಟ್ಟವು. ಮೇ ತಿಂಗಳ 10, 11ರಂದು ನಡೆಯಲಿರುವ ಕ್ರಿಕೆಟ್ ಕ್ರೀಡಾಕೂಟಕ್ಕೆ ಹಲವಾರು ಸಲಹೆ ಸೂಚನೆಗಳನ್ನು ಈ ಸಭೆಗೆ ಆಗಮಿಸಿದ ಜಿಲ್ಲಾ ಸಮಿತಿ ಸದಸ್ಯರು ಹಾಗೂ ತಾಲೂಕು ಸಮಿತಿ ಸದಸ್ಯರುಗಳು ನೀಡಿರುತ್ತಾರೆ ಈ ಸಭೆಗೆ ಸಂಘದ ಗೌರವ ಅಧ್ಯಕ್ಷರಾದ ಜೊಕಿಂ ವಾಜ್ ಕಾರ್ಯಧ್ಯಕ್ಷರಾದ ವಿ.ಎ ಲಾರೆನ್ಸ್ ಜಿಲ್ಲಾ ಉಪಾಧ್ಯಕ್ಷರಾದ ಯೇಸುದಾಸ್ ಎ ಜಿ, ರಾಹುಲ್ ಮಾರ್ಷಲ್ , ಜಿಲ್ಲಾ ಸಂಪರ್ಕ ಅಧಿಕಾರಿ ಫಿಲಿಪ್ ವಾಸ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಅಂತೋನಿ ಪ್ರಭುರಾಜ್ , ಜಿಲ್ಲಾ ನಿರ್ದೇಶಕರಾದ ಅಂತೋನಿ ಡಿಸೋಜ ಉಪಸ್ಥಿತರಿದ್ದರು ಹಾಗೆಯೇ ಮಡಿಕೇರಿ ತಾಲೂಕ ಅಧ್ಯಕ್ಷರಾದ ಸಭಾಸ್ಟೀನ್ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಡೆನ್ಸಿಲ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪ್ರಶಾಂತ್ ಲೋಬೋ ಮಹಿಳಾ ಘಟಕದ ಅಧ್ಯಕ್ಷರಾದ ಫಿಲೋಮಿನಾ ,ಜಿಲ್ಲಾ ಕಾರ್ಯದರ್ಶಿ ಜುಡಿ ವಾಜ್ ಉಪಸ್ಥಿತರಿದ್ದರು, ಹಾಗೂ ಸುಂಟಿಕೊಪ್ಪ ಧರ್ಮಕೇಂದ್ರದ ಪ್ರಮುಖರಾದ ಗಾಡ್ವಿನ್ ರೋಜ್ ಮೇರಿ ಗ್ರೇಸಿ ಉಪಸ್ಥಿತರಿದ್ದರು.