ಕುಶಾಲನಗರ, ಏ 18: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದ ವ್ಯಕ್ತಿ ಅಪಘಾತದಲ್ಲಿ ದುರ್ಮರಣ ಹೊಂದಿದ ಘಟನೆ ವಾಲ್ನೂರಿನಲ್ಲಿ ನಡೆದಿದೆ.
ವಾಲ್ನೂರು ಬಿಜೆಪಿ ಕಾರ್ಯಕರ್ತ ರಾಮಪ್ಪ (58) ಮೃತ ದುರ್ದೈವಿ. ಪ್ರಚಾರ ನಿರತ ಗುಂಪಿನ ಮೇಲೆ ಅತಿ ವೇಗದಿಂದ ಬಂದ ಎಸ್ಟೀಂ ವಾಹನ ಡಿಕ್ಕಿಯಾದ ಪರಿಣಾಮ ರಾಮಪ್ಪ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಕಂಬಿಬಾಣೆಯ ಹರ್ಷದ್ ಮತ್ತು ಸೌಕತ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಘಟನೆ ಬಳಿಕ ಅಪಘಾತ ನಡೆದ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳ ಭೇಟಿಯಿಂದ ಪರಿಸ್ಥಿತಿ ತಿಳಿಗೊಂಡಿದೆ.
Back to top button
error: Content is protected !!