ಟ್ರೆಂಡಿಂಗ್

ಒಕ್ಕಲಿಗರ ಬಗ್ಗೆ ರಾಜಕೀಯ‌ ಮುಖಂಡರ ತುಚ್ಛ ಹೇಳಿಕೆಗೆ ಖಂಡನೆ

ಕುಶಾಲನಗರ, ಜು 26: ಒಕ್ಕಲಿಗ ಸಮುದಾಯ ಬಗ್ಗೆ ರಾಜಕೀಯ ನಾಯಕರು ತುಚ್ಚವಾಗಿ ಮಾತನಾಡಿದರೆ
ಒಕ್ಕಲಿಗರು ಮುಂದೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷ ಕುಶಾಲನಗರದ ಎಂ.ಡಿ.ಕೃಷ್ಣಪ್ಪ ಎಚ್ಚರಿಸಿದ್ದಾರೆ.
ರಾಜ್ಯದ ಪ್ರಬಲ ಸಮುದಾಯದ ಬಗ್ಗೆ ಕೇವಲವಾಗಿ ಮಾತನಾಡಿಬಿಟ್ಟರೆ ನಾವು ದೊಡ್ಡ ನೇತಾರರಾಗಿ ಬಿಡುತ್ತೆವೆ, ಬೇಗ ಪ್ರಚಾರ ಪಡೆಯಬಹುದೆಂಬ ಮಾನಸಿಕತೆ ಕಲೆವರಿಗೆ ಇರುವಂತಿದೆ.
ಕಳೆದ ಬಾರಿ ಲಿಂಗಾಯತರನ್ನು ಒಡೆಯಲು ಹೋಗಿ ಕೈ ಸುಟ್ಟುಕೊಂಡಿದ್ದು ಇದೀಗ ಒಕ್ಕಲಿಗರನ್ನು ಬೈದರೆ ಸರ್ವನಾಶ ಖಂಡಿತ.
ಸಿದ್ದರಾಮಯ್ಯರವರಾಗಲಿ, ಜಮೀರಾಗಲಿ ಇಂದು ನಾಯಕರಾಗಿದ್ದರೆ ಅದು ಒಕ್ಕಲಿಗರಿಂದ.
ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಘೋಷವಾಕ್ಯ ಹೇಳುವ ಸಿದ್ದರಾಮಯ್ಯರವರು ತಮ್ಮ ಶಿಷ್ಯವರ್ಗಕ್ಕೆ ಸಮಾಜ ಒಡೆಯುವ ಗುತ್ತಿಗೆ ಕೊಟ್ಟು ತಾನು ಅಹಿಂದ ನಾಯಕ ಎನ್ನುತ್ತಿದ್ದಾರೆ. ಹೀಗೆ ಮುಂದುವರಿದರೆ ಸಿದ್ದರಾಮಯ್ಯ ಮತ್ತು ಜಮೀರ್ ಕ್ಷೇತ್ರ ಹುಡುಕುವುದರಲ್ಲೆ ಕಾಲಕಳೆಯಬೇಕಾಗುತ್ತೆ.
ಬೆಂಗಳೂರು ಕಟ್ಟಿದ್ದಯ ಒಕ್ಕಲಿಗ, ವಿಧಾನ ಸೌಧ ವಿಕಾಸ ಸೌಧ ಕಟ್ಟಿದ್ದು ಒಕ್ಕಲಿಗ, ಈ ರಾಜ್ಯಕ್ಕೆ 4 ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿ ಕೊಟ್ಟ ಸಮುದಾಯ ಒಕ್ಕಲಿಗ ಸಮುದಾಯ. ಅದಕ್ಕೆ ಕಾರಣ ಒಕ್ಕಲಿಗರ ಮತ್ತು ಇತರೆ ಸಮುದಾಯದ ನಡುವೆ ಇರುವ ಬಾಂಧವ್ಯ, ಗುಣ, ನಡತೆ. ಇದನ್ನ ಹಾಳು ಮಾಡಲೆಂದೆ ಕೆಲವರು ಪಾಕಿಸ್ತಾನದಿಂದ ಬಂದದ್ದು ಆಗಿದೆ.
ಇಂದು ಒಕ್ಕಲಿಗರಿಗಿಂತ ಹೆಚ್ಚು ಇದ್ದೀವಿ, ನಾಳೆ ಹಿಂದುಗಳಿಗಿಂತ ಜಾಸ್ತಿ ಇದೀವಿ ಅಂತಾರೆ. ಇಂಥವರನ್ನ ಈಗಲೇ ಕರ್ನಾಟಕದಿಂದ ಕಿತ್ತೊಗೆಯದಿದ್ದರೆ ಕರ್ನಾಟಕವನ್ನು ಜಾತಿ ಹೆಸರಲ್ಲಿ ಹೊಡೆದು ಹೋಳು ಮಾಡಿಬಿಡುತ್ತಾರೆ ಎಂದು ಕೃಷ್ಣಪ್ಪ ಪತ್ರಿಕಾ ಪ್ರಕಟಣೆ‌ ಮೂಲಕ ಆಕ್ರೋಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!