ಅವ್ಯವಸ್ಥೆ

ಹಾರಂಗಿ ಅಣೆಕಟ್ಟೆ ಸಂಪೂರ್ಣ ಕಸಮಯ: ಸ್ಥಳೀಯರ ಆಕ್ರೋಷ

ಕುಶಾಲನಗರ, ಜು 26: ರಾಜ್ಯದ ಪ್ರಮುಖ‌ ಜಲಾಶಯಗಳಲ್ಲಿ ಒಂದಾದ ಅಂತರಾಷ್ಟ್ರೀಯ ಪ್ರವಾಸಿ ತಾಣ ಹಾರಂಗಿ ಜಲಾಶಯ ಆವರಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದೆ.
ಅಣೆಕಟ್ಟೆಯಿಂದ ಹೊರಬಿಡುವ ನೀರಿನ ವೈಭವ ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಇತ್ತ ಆಗಮಿಸುತ್ತಿದ್ದಾರೆ.‌ಇದರೊಂದಿಗೆ ಉದ್ಯಾನವನ ಹಾಗೂ ಸಂಗೀತ ಕಾರಂಜಿ ವೀಕ್ಷಣೆಗೂ ಹೆಚ್ಚಿನ ಪ್ರವಾಸಿಗರು ಲಗ್ಗೆಯಿಡುತ್ತಾರೆ.
ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರ ದಟ್ಟಣೆ ಕಾರಣ ಸ್ವಾಭಾವಿಕವಾಗಿ ಅಣೆಕಟ್ಟೆ ಆವರಣ ಕಸಮಯವಾಗುತ್ತಿದೆ. ಅಣೆಕಟ್ಟೆ ಮುಂಭಾಗದ ಅಂಗಡಿ‌ ಮುಂಗಟ್ಟುಗಳು, ರಸ್ತೆ ಬದಿಯಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿರುವುದು ಕಾಣಬಹುದು. ಹಾರಂಗಿ ಜಲಾಶಯದ ಉದ್ಯಾನಕ್ಕೆ ಹಾಗೂ ಸಂಗೀತ ಕಾರಂಜಿಗೆ ಪ್ರವೇಶ ಶುಲ್ಕ‌ ನಿಗದಿಪಡಿಸಲಾಗಿದೆ. ಶುಲ್ಕ ವಸೂಲಿ ಮಾಡುವ ನಿಗಮದ ವತಿಯಿಂದ ಅಗತ್ಯ ಸ್ವಚ್ಚತೆ ಕೈಗೊಳ್ಳಬೇಕಾಗಿದೆ. ಆದರೆ ಕಾಲಕಾಲಕ್ಕೆ ಸ್ವಚ್ಚತೆ ನಡೆಸದ‌ ಕಾರಣ‌ ಕಸದ ರಾಶಿ ಎಲ್ಲೆಡೆ ಹರಡಿ ಸಂಪೂರ್ಣ ಅಶುಚಿತ್ವ ವಾತಾವರಣ ಸೃಷ್ಟಿಯಾಗಿದೆ. ಕೂಡಲೆ ಈ ಬಗ್ಗೆ ಸಂಬಂಧಿಸಿದ ನಿಗಮದ ಅಧಿಕಾರಿಗಳು ಅಥವಾ ಈ ಭಾಗದ ಜನಪ್ರತಿನಿಧಿಗಳು ಗಮನಹರಿಸುವಂತೆ ಪ್ರವಾಸಿಗರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!