ಕುಶಾಲನಗರ, ಜು 26: ಕುಶಾಲನಗರ ಲಯನ್ಸ್ ಕ್ಲಬ್ ವತಿಯಿಂದ ಹುಲುಸೆಯಲ್ಲಿ ಕಾರ್ಗಿಲ್ ದಿವಸ್ ಆಚರಿಸಲಾಯಿತು.
ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹುತಾತ್ಮರಾದ ಯೋಧ ಆರ್.ಜಿ.ಸತೀಶ್ ಸ್ಮಾರಕ ಪ್ರತಿಮೆ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.
ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಲಯನ್ಸ್ ಅಧ್ಯಕ್ಷ ಎಂ.ಎಸ್.ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಸೈನಿಕರು ತಮ್ಮ ಅಭಿಪ್ರಾಯ, ಅನುಭವಗಳನ್ನು ಹಂಚಿಕೊಂಡರು.
ಇದೇ ಸಂದರ್ಭ ಹುತಾತ್ಮ ಸತೀಶ್ ಅವರ ತಾಯಿ ಜಯಮ್ಮ, ನಿ.ಕ್ಯಾ.ಡಿ.ಕೆ
ಚಿಣ್ಣಪ್ಪ, ನಿ.ಹವಾಲ್ದಾರ್ ಮಹಮ್ಮದ್ ನಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ನಿ.ಕರ್ನಲ್ ಆರ್.ಕೆ ಎನ್.ಮೂರ್ತಿ, ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ, ಹೆಬ್ಬಾಲೆ ಗ್ರಾಪಂ ಸದಸ್ಯ ಶಿವನಂಜಪ್ಪ, ಲಯನ್ಸ್ ಕಾರ್ಯದರ್ಶಿ ವಿ.ಎಸ್.ಸುಮನ್ ಬಾಲಚಂದ್ರ, ಖಜಾಂಚಿ ಕೆ
ಕೆ.ಕೆ.ಹೇಮಂತ್, ಮಾಜಿ ಅಧ್ಯಕ್ಷರುಗಳಾದ ಪಿ.ಎಂ.ಮೋಹನ್, ಟಿ.ಕೆ.ರಾಜಶೇಖರ್, ಕೆ.ಎಸ್.ಸತೀಶ್ ಕುಮಾರ್, ಕೆ.ಆರ್.ಹರ್ಷ, ಪ್ರಮುಖರಾದ ಡಾ.ರಾಘವೇಂದ್ರ, ಕವಿತಾ ಮೋಹನ್, ರಮ್ಯ ಸುಮನ್, ಸರೋಜ ಚಿಣ್ಣಪ್ಪ, ಅಮಿತಾ ಸತೀಶ್, ಹುತಾತ್ಮ ಯೋಧ ಸತೀಶ್ ಸಹೋದರ ಮಹೇಶ್, ಊರಿನ ಮುಖಂಡರಾದ ಮಂಜುನಾಥಸ್ವಾಮಿ, ಮಹೇಶ್, ನವೀನ್, ಗಣೇಶ್ ಮತ್ತಿತರರು ಇದ್ದರು.
Back to top button
error: Content is protected !!