ಕುಶಾಲನಗರ, ಫೆ 19:ಕೂರ್ಗ್ ವಾಟರ್ ಪಾರ್ಕ್ ಆಯೋಜಿಸುತ್ತಿರುವ ನಾಲ್ಕನೇ ವರ್ಷದ ಅದ್ದೂರಿಯ ಲೆಜೆಂಡ್ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಶ್ರೇಷ್ಠ ಮಟ್ಟದ ದಾಳಿಗಾರ ಜಾವಗಲ್ ಶ್ರೀನಾಥ್ ರವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆತ್ಮೀಯವಾಗಿ ಆಹ್ವಾನಿಸಲಾಯಿತು.ಇದೇ ಸಂದರ್ಭ ಅವರು ಕ್ರೀಡಾಕೂಟದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದು, ಏನ್ರೀ ಕ್ರೀಡಾಕೂಟವನ್ನು ಇಷ್ಟೊಂದು ಚೆನ್ನಾಗಿ ಮಾಡ್ತೀರಾ, ನನಗಂತೂ ಬಹಳ ಖುಷಿಯಾಯಿತು ಎಂದು ಕ್ರೀಡಾಕೂಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಇದು ಕೇವಲ ನಾಲ್ಕು ವರ್ಷವಲ್ಲ ಮುಂದೆ ನೂರು ವರ್ಷ ಪೂರೈಸಿಲಿ ಎಂದು ಕ್ರೀಡಾಕೂಟಕ್ಕೆ ಅವರು ಶುಭ ಹಾರೈಸಿದರು.
Back to top button
error: Content is protected !!