ಟ್ರೆಂಡಿಂಗ್

KSRTC ಬಸ್ ಡಿಪೋ ಎದುರು ಪ್ರತಿಭಟನೆಯ ಎಚ್ಚರಿಕೆ ನೀಡಿದ ಭಾಸ್ಕ ನಾಯಕ್

ಕುಶಾಲನಗರ, ಸೆ 12: ಮಡಿಕೇರಿಯ KSRTC ಡಿಪೋದಲ್ಲಿ ಹೊರಗುತ್ತಿಗೆ ಆದರದಲ್ಲಿ ಡ್ರೈವರ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗದೇ ಇರುವ ಬಗ್ಗೆ ಹಲವು ನೌಕರರು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರ ಬಳಿ ತಮ್ಮ ಅಳಲನ್ನು ತೋರಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಭಾಸ್ಕರ ನಾಯಕರವರು ಮಡಿಕೇರಿ KSRTC ಡಿಪೋದಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 220 ನೌಕರರಿಗೂ ತಿಂಗಳ 1 ಅಥವಾ 2 ನೇ ತಾರೀಕು ವೇತನ ಖಾತೆಗೆ ಜಮವಾಗುತ್ತದೆ ಹೊರಗುತ್ತಿಗೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 80 ನೌಕರರಲ್ಲಿ ಕೆಲವರಿಗೆ ಮೈಸೂರು ಮೂಲದ ಏಜೆನ್ಸಿ ಒಂದು ವೇತನವನ್ನು ನೀಡಿರುತ್ತಾರೆ ಆದರೆ ಮಂಗಳೂರು ಮೂಲದ ಏಜೆನ್ಸಿ ಅವರು ನೀಡಬೇಕಾದ ಹಲವು ಹೊರಗುತ್ತಿಗೆಯ ನೌಕರರಿಗೆ ಇನ್ನೂ ಕೂಡ ವೇತನ ಸಿಗದೇ ಇರುವುದರಿಂದ ಎಲ್ಲರಂತೆ ಹಬ್ಬ ಆಚರಿಸಬೇಕಾದ ನೌಕರರ ಕುಟುಂಬದವರು ಕಣ್ಣೀರು ಹಾಕುವಂಥ ಪರಿಸ್ಥಿತಿ ಎದುರಾಗಿದೆ ಇದರಿಂದ ಮನನೊಂದು ಹಲವು ನೌಕರರು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದಾರೆ ನಾಳೆಯಿಂದ ವೇತನ ಸಿಗದೇ ಇರುವವರು ಕೆಲಸಕ್ಕೆ ಹೋಗದೆ ಸ್ಟ್ರೈಕ್ ಮಾಡುವ ನಿರ್ಧಾರದಲ್ಲಿ ಇರುವ ಬಗ್ಗೆ ನೌಕರರು ತಿಳಿಸಿದ್ದು ಇದರಿಂದ ಈ ನೌಕರರ ಕುಟುಂಬ ತೀರ ಕಷ್ಟದ ಪರಿಸ್ಥಿತಿಯನ್ನು ಎದುರಿಸುವಂಥಾಗಿದೆ ಮತ್ತು ನೌಕರರು ಕೆಲಸಕ್ಕೆ ಬಾರದಿದ್ದರೆ KSRTC ಬಸ್ ಸಂಚಾರ ವಾಗದೆ ಜನಸಾಮಾನ್ಯರಿಗೆ ತೊಂದರೆ ಉಂಟಾಗುವ ಎಲ್ಲ ಸಾಧ್ಯತೆಗಳು ಕೂಡ ಎದ್ದು ಕಾಣುತ್ತಿದೆ ಈಗಾಗಲೇ ಸಂಬಂಧಪಟ್ಟ ಮಡಿಕೇರಿಯ KSRTC ಡಿಪೋ ಮ್ಯಾನೇಜರ್ ಗೆ ಕೂಡ ದೂರವಾಣಿ ಮುಖಾಂತರ ಕರೆ ಮಾಡಿ ಕೂಡಲೇ ಸಮಸ್ಯೆಯನ್ನು ಸರಿಪಡಿಸುವಂತೆ ತಿಳಿಸಲಾಗಿದೆ. ಸಮಸ್ಯೆಯನ್ನು ಸರಿಪಡಿಸಲು ವಿಳಂಬ ಧೋರಣೆ ಮಾಡಿದರೆ ನೌಕರರೊಂದಿಗೆ ಬಸ್ ಡಿಪೋ ಎದುರು ಪ್ರತಿಭಟನೆ ಮಾಡುವುದಾಗಿ ಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!