ಕುಶಾಲನಗರ ಸೆ 12: ಕುಶಾಲನಗರದ ಜನತಾ ಕಾಲೋನಿ ಶ್ರೀ ರಾಮ ಯುವಕ ಸಂಘದ 27 ನೇ ವರ್ಷದ ಅದ್ದೂರಿ ಗೌರಿ – ಗಣೇಶೋತ್ಸವದ ಪ್ರಯುಕ್ತ ಕುಶಾಲನಗರ ಸ್ಥಳೀಯ ಮಕ್ಕಳಿಗಾಗಿ ತಾಲ್ಲೂಕು ಮಟ್ಟದ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ಮಕ್ಕಳು ನೆರೆದಿದ್ದ ಜನರ ಹಾಗೂ ತೀರ್ಪುಗಾರರ ಮೈ ರೋಮಾಂಚನಗೊಳ್ಳುವ ನೃತ್ಯ ಪ್ರದರ್ಶನವನ್ನು ನೀಡಿ ನೃತ್ಯ ಶಾಲೆಯ ಒಟ್ಟು 2 ತಂಡಗಳು ಈ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಹಾಗೂ ದ್ವಿತೀಯ ಬಹುಮಾನಗಳ ವಿಜೇತರಾಗಿ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡರು.
ಈ ನೃತ್ಯ ಸ್ಪರ್ಧೆಯಲ್ಲಿ ಒಟ್ಟು 10 ಕ್ಕೂ ಅಧಿಕ ಸ್ಥಳೀಯ ಕಲಾ ತಂಡಗಳು ಭಾಗವಹಿಸಿದ್ದು, ಅದರಲ್ಲಿ ನೃತ್ಯ ಸಂಯೋಜಕ ಅಕ್ತರ್ ರವರ ನೇತೃತ್ವದ ಎ ಕ್ರಿಯೇಟಿವ್ ನೃತ್ಯ ಶಾಲಾ ಮಕ್ಕಳು ಉತ್ತಮ ನೃತ್ಯ ಪ್ರದರ್ಶನವನ್ನು ನೀಡುವ ಮೂಲಕ ಜನರ ಗಮನ ಸೆಳೆದರು ಹಾಗೆಯೇ ತೀರ್ಪುಗಾರರ ಮೆಚ್ಚುಗೆ ಪಾತ್ರರಾಗಿದ್ದರು.
ತಾಲ್ಲೂಕು ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಝೀ ಕನ್ನಡ, ಕಲರ್ಸ್ ಕನ್ನಡ, ಈ-ಟಿ.ವಿ ತೆಲುಗು ಹಾಗೆಯೇ ಭಾವಪೂರ್ಣ ಕನ್ನಡ ಚಲನಚಿತ್ರದ ನೃತ್ಯ ಸಂಯೋಜಕ ಶಿವಮೊಗ್ಗದ ಮನೋಜ್ ಎಂ.ಕೆ ಹಾಗೂ ಹಾಸನದ ಡಿ.ಜೆ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಯೋಜಕ ಪವನ್ ಹಾಗೂ ಚಿಕ್ಕಮಗಳೂರಿನ ತಾಂಡವಂ ನೃತ್ಯ ಶಾಲೆಯ ನೃತ್ಯ ಸಂಯೋಜಕ ಚಂದನ್ ರವರು ಆಗಮಿಸಿದ್ದರು.
ಈ ನೃತ್ಯ ಸ್ಪರ್ಧೆಯ ಆಯೋಜಕರಾಗಿ ಶ್ರೀ ರಾಮ ಯುವಕ ಸಂಘದ ಅಧ್ಯಕ್ಷರು ಕುಮಾರ ಎಂ. ಎಸ್ ಉಪಾಧ್ಯಕ್ಷರು ಜೀವನ್ ಹಾಗೆಯೇ ಕಾರ್ಯದರ್ಶಿಗಳು ಕೃತೀಕ್, ಚಂದನ್, ಅಕ್ಷಯ್, ಪುನೀತ್ ಹಾಗೂ ವಿಕ್ರಂ ವಿಜೇತರಾದ ತಂಡಗಳಿಗೆ ಬಹುಮಾನವನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂಜಯ್ ನೆರವೇರಿಸಿದರು. ಹಾಗೆಯೇ ಊರಿನ ಪ್ರಮುಖರೂ ಹಾಗೂ ಬೆಂಬಲಿಗರಿಗೆ ಗೌರವಿಸಿ ಸನ್ಮಾನಿಸಲಾಯಿತು.
Back to top button
error: Content is protected !!