ಟ್ರೆಂಡಿಂಗ್

ನಗರೋತ್ಥಾನ ಕರ್ಮಕಾಂಡ: ಇದ್ದ ಚರಂಡಿ ಆಗೆದುಹಾಕಿದ ಗುತ್ತಿಗೆದಾರ ನಾಪತ್ತೆ

ಸೋಮವಾರಪೇಟೆ, ಮಾ 23- ರಸ್ತೆಯ ಪಕ್ಕದಲ್ಲಿ ಚೆನ್ನಾಗಿದ್ದ ಚರಂಡಿಯನ್ನು ಅಗೆದು ಹಾಕಿದ ಗುತ್ತಿಗೆದಾರ ನಾಪತ್ತೆಯಾಗಿದ್ದು,ಮನೆಯ ತಡೆಗೋಡೆ ಕುಸಿದು ಅಪಾಯಕಾರಿ ಸ್ತಿತಿತಲುಪಿದೆ.
ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ನಗರೋತ್ಥಾನ ಯೋಜನೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಸೋಮವಾರಪೇಟೆಗೆ ಮಾರಕವಾಗುತಿರುವುದು ವಿಪರ್ಯಾಸ.ಪಟ್ಟಣದ ವಾರ್ಡ್ ಸಂಖ್ಯೆ 7ರ ರೇಂಜರ್ಸ್ ಬ್ಲಾಕ್ ನಲ್ಲಿ ದಿವಂಗತ ನಂಬಿಯಾರ್ ರವರ ಮನೆಯ ಮುಂದೆ ಉತ್ತಮ ಸ್ಥಿತಿಯಲ್ಲಿದ್ದ ಚರಂಡಿಯನ್ನು,ಕಾಂಕ್ರೀಟ್ ಚರಂಡಿ ಮಾಡುವ ಉದ್ದೇಶದಿಂದ ಕಳೆದ ವರ್ಷ ಅಗೆದು ಹಾಕಲಾಯಿತು ಈ ರೀತಿ ಅದೆದದ್ದರಿಂದ ಕಳೆದ ಮಳೆಯಲ್ಲಿ ಮನೆಗೆ ಕಟ್ಟಲಾಗಿದ್ದ ತಡೆಗೋಡೆ ಕುಸಿಯಲಾರಂಭಿಸಿತು ಆದರೆ ಈ ಬಗ್ಗೆ ಪಟ್ಟಣ ಪಂಚಾಯ್ತಿಯಾಗಲಿ,ಗುತ್ತಿಗೆದಾರನಾಗಲಿ ತಲೆಕೆಡಿಸಿಕೊಳ್ಳಲಿಲ್ಲ ಮಗ ಪರಊರಿರನಲ್ಲಿ ಮನೆಯಲ್ಲಿ ವಯಸ್ಸಾದ ಮಹಿಳೆ ಎಷ್ಟು ಭಾರಿ ಪಂಚಾಯ್ತಿ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು ಅಧಿಕಾರಿಗಳ ಮನಸ್ಸು ಮಾತ್ರ ಕರಗಲಿಲ್ಲ.
ಇತ್ತೀಚೆಗೆ ಅಗೆದು ಹಾಕಿರುವ ಸ್ಥಳವನ್ನು ಬಿಟ್ಟು ಇಪ್ಪತ್ತು ಮೀಟರ್ ಮುಂದೆ ಹೊಸ ಚರಂಡಿ ನಿರ್ಮಾಣ ಮಾಡಿದ್ದಾರೆ ಅದು ಕೂಡ ಹಾವಿನಂತೆ ಅಂಕುಡೊಂಕಾಗಿ ನಿರ್ಮಾಣವಾಗಿದೆ. ಚರಂಡಿ ನಿರ್ಮಾಣವಾಗದೆ ಕಸಕಡ್ಡಿ ಎಲ್ಲಾ ಬಂದು ಮನೆಯ ಮುಂದೆ ಶೇಖರಣೆಯಾಗುತಿದೆ.ಮತ್ತೊಂದೆಡೆ ತಡೆಗೋಡೆ ಕುಸಿಯುತ್ತಿದ್ದು ಮನೆಗೆ ಅಪಾಯವಾಗುವ ಸಾಧ್ಯತೆಯೂ ಇದೆ ಆದರೆ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಯಾಗಲಿ,ಅಧಿಕಾರಿಗಳಾಗಲಿ ಈ ಬಗ್ಗೆ ಗಮನ ಹರಿಸಿಲ್ಲ.ಜಿಲ್ಲಾಧಿಕಾರಿಗಳ ಕಚೇರಿಯಿಂದ ಆಗಾಗ ಬಂದು ಹೋಗುವ ಅಭಿಯಂತರರಿಗೆ ಇದು ಈ ವರೆಗೆ ಕಂಡಿಲ್ಲಾ.ಪಟ್ಟಣ ಪಂಚಾಯ್ತಿ ಅಭಿಯಂತರರು ಈ ಕಡೆ ತಲೆಯೇ ಹಾಕಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ನಗರೋತ್ಥಾನ ಯೋಜನೆ ಗುತ್ತಿಗೆ ಪಡೆದ ಗುತ್ತಿಗೆ ದಾರನಿಂದ ತೊಂದರೆ ಆಗುತ್ತಿದ್ದರೂ ಸಹ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು…. ಡಾಲರ್ ಪ್ರಶ್ನೆ? ಯಾಗಿದೆ.
ನಗರೋತ್ಥಾನ ಯೋಜನೆ ಗುತ್ತಿಗೆ ಪಡೆದ ಗುತ್ತಿಗೆದಾರ ಸರಿಯಾಗಿ ಕಾಮಗಾರಿ ನಡೆಸದೆ ಇರುವುದರಿಂದ ಸಮಸ್ಯೆ ಉದ್ಭವವಾಗಿದೆ ಈ ಬಗ್ಗೆ ಸಭೆಗಳಲ್ಲಿ ಚರ್ಚಿಸಿದ್ದೇವೆ ಆದರೂ ಪ್ರಯೋಜನವಾಗಿಲ್ಲ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಆದಷ್ಟು ಬೇಗ ಕಾಮಗಾರಿ ಮುಗಿಸಬೇಕೆಂದು ವಾರ್ಡ್ ಸದಸ್ಯ ಜೀವನ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!